ಡೆನ್ಮಾರ್ಕ್ ಓಪನ್ : ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿ ಸಿಂಧು, ಶ್ರೀಕಾಂತ್

ಒಡೆನ್ಸ್ : ನಾಳೆಯಿಂದ 7.50 ಲಕ್ಷ ಡಾಲರ್ ಬಹುಮಾನ ಮೊತ್ತದ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದ್ದು, ಪಿ.ವಿ.ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಭಾರತದ ಭರವಸೆಯ ತಾರೆಯರಾಗಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಜಪಾನ್ ಒಪನ್ ಪಂದ್ಯಾವಳಿಯಲ್ಲಿ ಆರಂಭಿಕ ಸುತ್ತುಗಳಲ್ಲೇ ನಿರ್ಗಮಿಸಿದ್ದ ಸಿಂಧು ಮತ್ತು ಶ್ರೀಕಾಂತ್ ಡೆನ್ಮಾರ್ಕ್ ಓಪನ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.
ರಿಯೋ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್‍ನ ರಜತ ಪದಕ ವಿಜೇತೆ ಸಿಂಧು ಮೇಲೆ ಭಾರತೀಯರು ಅಪಾರ ವಿಶ್ವಾಸ ಹೊಂದಿದ್ದಾರೆ. ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್‍ನಲ್ಲಿ ಈಗಾಗಲೇ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿರುವ ಹೆಮ್ಮೆಯ ಆಟಗಾರ್ತಿ ಈ ಪಂದ್ಯಾವಳಿಯಲ್ಲೂ ಪ್ರಬಲ ಎದುರಾಳಿಗಳೊಂದಿಗೆ ಸೆಣಸಲಿದ್ದಾರೆ.
Comments