ಐಪಿಎಲ್ ಗೆ ವಿದಾಯ ಹೇಳಿದ ನೆಹ್ರಾ
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡುವುದಿಲ್ಲ ಎಂಬುದನ್ನು ನೆಹ್ರಾ ಸ್ಪಷ್ಟಪಡಿಸಿದ್ದರು. ನಾನು ಏನೇ ನಿರ್ಧಾರ ತೆಗೆದುಕೊಂಡರು ಮತ್ತೆ ಹಿಂತುರುಗಿ ಯೋಚಿಸುವುದಿಲ್ಲ. ನಾನು ನಿವೃತ್ತಿ ಹೊಂದಿದ ಮೇಲೆ ಐಪಿಎಲ್ ನಲ್ಲೂ ಆಡುವುದಿಲ್ಲ ಎಂದರು.
ನವದೆಹಲಿ: 38 ಹರೆಯದ ಆಶಿಶ್ ನೆಹ್ರಾ ಐಪಎಲ್ ಗೂ ಗುಡ್ ಬೈ ಹೇಳಿದ್ದಾರೆ. ತಮ್ಮ ಲಾಸ್ಟ್ ಪಂದ್ಯವನ್ನು ನೆಹ್ರಾ ನವೆಂಬರ್ 01ರಂದು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ದೆಹಲಿ ಫಿರೋಜ್ ಷಾ ಮೈದಾನದಲ್ಲಿ ಆಡಲಿದ್ದಾರೆ. ಸ್ವಂತ ನಗರದಲ್ಲಿ, ತವರಿನ ಮೈದಾನದಲ್ಲಿ ನಿವೃತ್ತಿ ಹೊಂದುವುದು ಖುಷಿಯ ಸಂಗತಿ. ಅದಕ್ಕಿಂತ ದೊಡ್ಡ ಗೌರವ ಬೇರೋಂದಿಲ್ಲ ಎಂದು ನೆಹ್ರಾ ಹೇಳಿದ್ದಾರೆ.
ಅದೇ ರೀತಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡುವುದಿಲ್ಲ ಎಂಬುದನ್ನು ನೆಹ್ರಾ ಸ್ಪಷ್ಟಪಡಿಸಿದ್ದರು. ನಾನು ಏನೇ ನಿರ್ಧಾರ ತೆಗೆದುಕೊಂಡರು ಮತ್ತೆ ಹಿಂತುರುಗಿ ಯೋಚಿಸುವುದಿಲ್ಲ. ನಾನು ನಿವೃತ್ತಿ ಹೊಂದಿದ ಮೇಲೆ ಐಪಿಎಲ್ ನಲ್ಲೂ ಆಡುವುದಿಲ್ಲ ಎಂದರು.
ತಮ್ಮ ನಿವೃತ್ತಿ ನಿರ್ಧಾರವನ್ನು ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಅವರಿಗೆ ನೆಹ್ರಾ ತಿಳಿಸಿದ್ದಾರೆ. ಅಲ್ಲದೇ ತಮ್ಮ 18 ವರ್ಷಗಳ ಸುದೀರ್ಘ ಕ್ರಿಕೆಟ್ಜೀವನದಲ್ಲಿ 44 ಟೆಸ್ಟ್, 157 ಏಕದಿನ ಮತ್ತು 34 ಟ್ವಂಟಿ-20 ಪಂದ್ಯಗಳನ್ನು ಆಡಿದ್ದಾರೆ.
Comments