6 ಪಂದ್ಯಗಳ ಮಟ್ಟಿಗೆ ಲಂಕಾ ಓಪನರ್ ಸಸ್ಪೆಂಡ್ ಗೆ ಕಾರಣವೇನು ?

ಭಾರತ ವಿರುದ್ಧದ ಸರಣಿ ವೇಳೆ ಧನುಷ್ಕಾ, ಅಭ್ಯಾಸಕ್ಕೆ ಗೈರಾಗುತ್ತಿದ್ದರು. ಅಭ್ಯಾಸಕ್ಕೆ ಬಂದರೂ ಅಸಡ್ಡೆ ತೋರುತ್ತಿದ್ದರು ಎನ್ನುವುದು ಧನುಷ್ಕಾ ಮೇಲಿರುವ ಆರೋಪ. ಅಭ್ಯಾಸದ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಲಂಕಾ ಆರಂಭಿಕ ಬ್ಯಾಟ್ಸ್'ಮನ್ ಧನುಷ್ಕಾ ಗುಣತಿಲಕ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜಾರಿ.
ಅಭ್ಯಾಸದ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಲಂಕಾ ಆರಂಭಿಕ ಬ್ಯಾಟ್ಸ್'ಮನ್ ಧನುಷ್ಕಾ ಗುಣತಿಲಕ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಂಡಿರುವ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್ಸಿ), ಅವರನ್ನು 6 ಏಕದಿನ ಪಂದ್ಯಗಳಿಂದ ನಿಷೇಧಿಸಲಾಗಿದೆ. ಜತೆಗೆ ವಾರ್ಷಿಕ ವೇತನದ ಶೇ.20ರಷ್ಟನ್ನು ದಂಡವಾಗಿ ವಿಧಿಸಲಾಗಿದೆ. ಜುಲೈ ತಿಂಗಳಿನಲ್ಲಿ ಧನುಷ್ಕಾ ಗಾಲೆಯಲ್ಲಿ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2 ಏಕದಿನ ಪಂದ್ಯದಲ್ಲೂ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಭುಜದ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.
Comments