ಅಣ್ಣ ಕೃನಾಲ್'ಗೆ ಹಾರ್ಧಿಕ್ ಕೊಟ್ಟಿದ್ದ ಮಾತು ಏನು..?

ಆಸೀಸ್ ಸರಣಿಯಲ್ಲಿ ಹಾರ್ದಿಕ್ ಅದ್ಭುತ ಪ್ರದರ್ಶನ ತೋರೋದಲ್ಲದೇ ಸರಣಿ ಶ್ರೇಷ್ಠನಾಗ್ತಿನಿ, ಅನ್ನೋದು ಅಂದು ಅಣ್ಣನಿಗೆ ಕೊಟ್ಟ ಮಾತನ್ನು ನೆರವೇರಿಸಿದ ಹಾರ್ದಿಕ್. ಏಕದಿನ ಸರಣಿಯಲ್ಲಿ ಪಾಂಡ್ಯನೇ ಕಿಂಗ್ ಹಾರ್ದಿಕ್ ಅಣ್ಣನಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ತಮ್ಮನ ಈ ಸಾಧನೆ ಕಂಡು ಅಣ್ಣ ಫುಲ್ ಖುಷ್.
ಸದ್ಯ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿ ಸರಣಿಯನ್ನ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಖುಷಿಯ ಅಲೆಯಲ್ಲಿ ತೇಲಾಡ್ತಿದೆ. 4-1 ರಿಂದ ಸರಣಿ ಗೆದ್ದಿರುವ ಕೊಹ್ಲಿ ಆಂಡ್ ಟೀಂ ಫುಲ್ ಜೋಶ್ನಲ್ಲಿದ್ದಾರೆ. ಅಷ್ಟೇ ಅಲ್ಲ ಇದೇ ಜೋಶ್ನಲ್ಲಿ ಭಾನುವಾರದಿಂದ ಶುರುವಾಗೋ ಟಿ20 ಸರಣಿಗೆ ರೆಡಿಯಾಗ್ತಿದ್ದಾರೆ. ಇಡೀ ಟೀಂ ಇಂಡಿಯಾ ಈಗ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದರೆ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಧನ್ಯತೋ ಭಾವದಲ್ಲಿದ್ದಾರೆ. ಕಾರಣ ಆಸೀಸ್ ಸರಣಿಗೆ ಬರೋದಕ್ಕೂ ಮುನ್ನ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ನೀಡಿದ್ದ ಭಾಷೆಯನ್ನ ಈಡೇರಿಸಿದ್ದಾರೆ. ಅಂದು ಕೊಟ್ಟ ಮಾತನ್ನ ಚಾಚು ತಪ್ಪದೆ ಮಾಡಿ ಈಗ ಅಣ್ಣನ ಖುಷಿಗೆ ಕಾರಣರಾಗಿದ್ದಾರೆ.
ಆಸೀಸ್ ವಿರುದ್ಧದ ಸರಣಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರುವುದಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆಸೀಸ್ ವಿರುದ್ಧ ಹಾರ್ದಿಕ್ ಪಾಂಡ್ಯನ ರೆಕಾರ್ಡ್ ಇಂತಿದೆ. ಒಟ್ಟು 5 ಪಂದ್ಯಗಳಲ್ಲಿ 222 ರನ್ಗಳಿಸಿದ ಪಾಂಡ್ಯ 6 ವಿಕೆಟ್ಗಳನ್ನ ಪಡೆದಿದ್ದಾರೆ. ಅಷ್ಟೇ ಅಲ್ಲ 2 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ತಮ್ಮನ ಸಾಧನೆ ಕಂಡು ಅಣ್ಣ ಫುಲ್ ಖುಷ್:ಟ್ವಿಟ್ಟರ್'ನಲ್ಲೇ ತಮ್ಮನನ್ನ ಹಾಡಿ ಹೊಗಳಿದ ಕೃನಾಲ್ ಹಾರ್ದಿಕ್ ಪಾಂಡ್ಯನ ಈ ಸಾಧನೆಗೆ ಅಣ್ಣ ಕೃನಾಲ್ ಪಾಂಡ್ಯ ಫುಲ್ ಥ್ರಿಲ್ ಆಗಿದ್ದಾರೆ ಅಷ್ಟೇ ಅಲ್ಲ ನನಗೆ ಕೊಟ್ಟಿದ್ದ ಮಾತನ್ನ ಉಳಿಸಿಕೊಂಡಿದ್ಯ ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ಟ್ವಿಟ್ಟರ್'ನಲ್ಲಿ ಹೇಳಿಕೊಂಡಿದ್ದಾರೆ.
Comments