ಟೀಂ ಇಂಡಿಯಾ ನಿರಂತರವಾಗಿ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ?

ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿ ಪಡೆ ಸತತ 4 ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯವನ್ನು ಭಾರತ ಗೆದ್ದರೆ, ಸತತ 10ನೇ ಜಯ ಗಳಿಸಿದರೆ ಮತ್ತೊಂದು ದಾಖಲೆಯೂ ಭಾರತ ತಂಡಕ್ಕೆ ಸಿಗಲಿದೆ.
ಈ ಹಿಂದೆ ಭಾರತ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನು ಗೆದ್ದಿತ್ತು. 1986ರಲ್ಲಿ 6 ಪಂದ್ಯಗಳ ಸರಣಿಯನ್ನು 3-2 ಹಾಗೂ 2013ರಲ್ಲಿ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು. ಟೀಂ ಇಂಡಿಯಾ ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸತತ 9 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ 2008ರ ನವೆಂಬರ್ ನಿಂದ 2009ರ ಫೆಬ್ರವರಿವರೆಗೆ ನಡೆದ 9 ಪಂದ್ಯಗಳನ್ನು ಸತತವಾಗಿ ಭಾರತ ಗೆದ್ದಿತ್ತು. ಇದೇ ಜುಲೈ 24ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಹಳೆಯ ದಾಖಲೆಯನ್ನು ಸರಿಗಟ್ಟಿದೆ. ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಂಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಾ ಎನ್ನುವುದು ಸದ್ಯದ ಕುತೂಹಲಕಾರಿ ಪ್ರಶ್ನೆಯಾಗಿದೆ.
Comments