ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಚಿನ್
ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ, ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ರವರು ಬೆಳ್ಳಂಬೆಳಗ್ಗೆ ಮಗನ ಜೊತೆ ಸೇರಿ ಪೊರಕೆ ಹಿಡಿದು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.
ಕೇಂದ್ರ ಸರ್ಕಾರದ 'ಸ್ವಚ್ಛತೆಯೇ ಸೇವೆ' ಕಾರ್ಯಕ್ರಮದನ್ವಯ ಮುಂಜಾನೆ ಸಚಿನ್ ಪೊರಕೆ ಹಿಡಿದು ಭಾಂದ್ರದ ಉಪನಗರದ ಬೀದಿಯಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತೆಯ ಮಹತ್ವವನ್ನು ದೇಶಕ್ಕೆ ಸಾರಿದರು. ಅವರ ಜೊತೆ ಕೆಲವು ಸ್ನೇಹಿತರು ಕೈಜೋಡಿಸಿದರು. ಸಚಿನ್ ಅವರ ಸ್ವಚ್ಛತೆಯ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ರ್ ನಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Comments