ವೀರೇಂದ್ರ ಸೆಹ್ವಾಗ್ ಅವರಿಗೆ ಅದ್ಧೂರಿ ಗಿಫ್ಟ್ ಕೊಟ್ಟ ಸಚಿನ್
ಸಚಿನ್ ತಮ್ಮ ಬಳಿಯಿದ್ದ ಬಿಎಂಡಬ್ಲ್ಯೂ ಸೆವೆನ್ ಸೀರೀಸ್ ಗೆ ಸೇರಿದ 1.14 ಕೋಟಿ ಮೌಲ್ಯದ ಬಿಎಂಡಬ್ಲ್ಯೂ 730 ಎಲ್ ಡಿ ಕಾರನ್ನು ಸೆಹ್ವಾಗ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಸೆಹ್ವಾಗ್, ಸಚಿನ್ ನೀಡಿರುವ ಕಾರಿನೊಂದಿಗೆ ಫೋಟೋ ಕ್ಲಿಕ್ಕಿಸಿ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದು ಸಚಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಈ ಇಬ್ಬರು ಕ್ರಿಕೆಟ್ ದಿಗ್ಗಜರು 2011ರ ವಿಶ್ವಕಪ್ ವಿಜೇತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ದೀರ್ಘ ಕಾಲದಿಂದ ಉತ್ತಮ ಗೆಳೆಯರಾಗಿದ್ದು ಇದೀಗ ತಮ್ಮ ಆತ್ಮೀಯ ಗೆಳೆಯನಿಗೆ ಸಚಿನ್ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.
Comments