ಕ್ರಿಕೆಟ್ ನಿಯಮಾವಳಿಗಳಲ್ಲಿ ಹಲವಾರು ಮಾರ್ಪಾಡು ..!
ಕ್ರಿಕೆಟ್ ನಿಯಮಾವಳಿಗಳಲ್ಲಿ ಭಾರಿ ಬದಲಾವಣೆ ಮಾಡಿದ್ದು , ಬ್ಯಾಟ್ಸ್ ಮನ್‍ಗಳು ಬಳಸುವ ಬ್ಯಾಟ್ಸ್ ನ ಸಾಂದ್ರತೆ, ಕ್ರೀಡಾಂಗಣದಲ್ಲಿ ಆಟಗಾರನ ವರ್ತನೆ, ಡಿಆರ್‍ಎಸ್ ನಿಯಮ, ರನೌಟ್ , ಕ್ಯಾಚ್‍ಗಳು ಸೇರಿದಂತೆ ಎಲ್ಲ ವಿಭಾಗಳಲ್ಲೂ ಭಾರೀ ಬದಲಾವಣೆಯನ್ನು ತಂದಿದೆ. ಸೆಪ್ಟೆಂಬರ್ 28 ರಿಂದಲೇ ಜಾರಿಗೆ ಬರುವಂತೆ ನಿಯಮ ರೂಪಿಸಿದೆ.
ಈ ನಿಯಮದ ಪ್ರಕಾರ ಬ್ಯಾಟ್ಸ್ ಮನ್ ತಾನು ಬಳಸುವ ಬ್ಯಾಟ್‍ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಕೂಡ ಬ್ಯಾಟ್‍ನ ತುದಿಯಲ್ಲಿ 40 ಎಂಎಂ ಮೊನಚಾಗಿರಬೇಕು ಮತ್ತು ಒಟ್ಟಾರೆ 67 ಎಂಎಂ ಮೊನಚನ್ನು ಮೀರಬಾರದು. ಆಟದ ಮಧ್ಯೆ ಬ್ಯಾಟ್‍ಗಳನ್ನು ಬದಲಾಯಿಸಬೇಕಾದರೆ ಅಂಪೈರ್‍ಗಳ ಒಪ್ಪಿಗೆಯನ್ನು ಪಡೆಯಲೇಬೇಕು ಎಂಬುದು ಸೇರಿದಂತೆ ಅನೇಕ ಬದಲಾವಣೆಗಳನ್ನು ಸೂಚಿಸಿದ್ದು ಈ ನಿಯಮ ಬರುವ, ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಅನ್ವಯವಾಗಲಿದೆ ಎಂದು ಐಸಿಸಿ ಮಂಡಳಿ ತಿಳಿಸಿದೆ.
Comments