ಪಾಂಡ್ಯ ಬ್ಯಾಟಿಂಗ್ ಪ್ರಮೋಷನ್ ಗುಟ್ಟು ಬಿಚ್ಚಿಟ್ಟ ಕೊಹ್ಲಿ

ಸ್ಪಿನ್ನರ್ ಗಳ ಬೌಲಿಂಗ್ ನಲ್ಲಿ ಅಟ್ಯಾಕಿಂಗ್ ಆಗಿ ಆಡಬೇಕು ಅನ್ನೋ ಕಾರಣಕ್ಕೆ ಶಾಸ್ತ್ರಿ ಪಾಂಡ್ಯಗೆ ಬ್ಯಾಟಿಂಗ್ ನಲ್ಲಿ ಪ್ರಮೋಷನ್ ನೀಡುವಂತೆ ಕೊಹ್ಲಿಗೆ ಸಲಹೆ ಕೊಟ್ಟಿದ್ದರು. ಪಾಂಡ್ಯ ಒಬ್ಬ ಸ್ಟಾರ್ , ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಕಮಾಲ್ ಮಾಡಬಲ್ಲ ಚತುರ ಎನ್ನುತ್ತಾರೆ ಕೊಹ್ಲಿ.
ಕಳೆದ ಐದಾರು ವರ್ಷಗಳಿಂದ್ಲೂ ಟೀಂ ಇಂಡಿಯಾಕ್ಕೆ ಇಂತಹ ಆಲ್ ರೌಂಡರ್ ಅವಶ್ಯಕತೆಯಿತ್ತು ಅಂತಾ ಹೇಳಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ನ ಬಹುದೊಡ್ಡ ಆಸ್ತಿ ಅಂತಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. ನಿನ್ನೆ ಇಂದೋರ್ ನಲ್ಲಿ ನಡೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ 78 ರನ್ ಸಿಡಿಸಿದ ಪಾಂಡ್ಯ ಗೆಲುವಿನ ರೂವಾರಿ ಎನಿಸಿಕೊಂಡಿದ್ರು.
ನಾಲ್ಕನೇ ಆಟಗಾರನಾಗಿ ಪ್ರಮೋಷನ್ ಪಡೆದು ಕಣಕ್ಕಿಳಿದ ಪಾಂಡ್ಯ, ಮನೀಷ್ ಪಾಂಡೆ ಜೊತೆಗೂಡಿ 78 ರನ್ ಗಳ ಜೊತೆಯಾಟವಾಡಿದ್ದಾರೆ. ನಾಯಕ ಕೊಹ್ಲಿ ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯರನ್ನು ನಾಲ್ಕನೇ ಆಟಗಾರನಾಗಿ ಕಣಕ್ಕಿಳಿಸಬೇಕು ಅನ್ನೋ ಐಡಿಯಾ ಕೋಚ್ ರವಿಶಾಸ್ತ್ರಿ ಅವರದ್ದು.
Comments