ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ.ಸಿಂಧು ಹೆಸರು ಸೂಚನೆ

ಒಲಿಂಪಿಕ್ಸ್ ಪದಕ ಸೇರಿದಂತೆ ಹತ್ತಾರು ಚಾಂಪಿಯನ್ಷಿಪ್ ಗೆದ್ದಿರುವ ಪಿ.ವಿ. ಸಿಂಧು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. ಹಾಗಾಗಿ ಸಿಂಧುಗೆ ಪದ್ಮಭೂಷಣ ಸಲ್ಲಬೇಕೆಂದು ಕ್ರೀಡಾ ಸಚಿವಾಲಯ ಅಭಿಪ್ರಾಯಪಟ್ಟಿದೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ. ಇತ್ತೀಚೆಗಷ್ಟೆ ಕೊರಿಯಾ ಓಪನ್ ಸಿರೀಸ್ ಗೆದ್ದುಕೊಂಡಿದ್ದ ಸಿಂಧು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದರು. ಈಗಾಗ್ಲೇ ಎಂ.ಎಸ್. ಧೋನಿ ಹೆಸರನ್ನು ಕೂಡ ಬಿಸಿಸಿಐ ಪದ್ಮಭೂಷಣ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ. 2015ರ ಮಾರ್ಚ್ ನಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪುರಸ್ಕಾರ ನೀಡಿ ಪಿ.ವಿ. ಸಿಂಧು ಅವರನ್ನು ಗೌರವಿಸಲಾಗಿತ್ತು.
Comments