50 ರನ್ ಅಂತರದ ರೋಚಕ ಗೆಲುವು ದಾಖಲಿಸಿದ ಭಾರತ
100ನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಅವರ ಕನಸು ನುಚ್ಚುನೂರಾಯಿತು. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯ ತಂಡವನ್ನು 50 ರನ್ನುಗಳಿಂದ ಸೋಲಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಆಸಿಸ್ ಸೋಲಿಗೆ ಕಾರಣರಾದ ಕುಲದೀಪ್ ಯಾದವ್ ಇದೀಗ ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಭರ್ಜರಿ ಬ್ಯಾಟಿಂಗ್ನಿoದಾಗಿ ಭಾರತ ತಂಡ ವಿಜಯೋತ್ಸವ ಆಚರಿಸಿತು. ಮಾರಕ ದಾಳಿ ಸಂಘಟಿಸಿದ ಭುವನೇಶ್ವರ್ ಆರಂಭಿಕ ಆಟಗಾರರಾದ ಕಾರ್ಟ್ರೈಟ್ ಮತ್ತು ವಾರ್ನರ್ ಅವರ ವಿಕೆಟನ್ನು ಕಿತ್ತು ಆಸ್ಟ್ರೇಲಿಯಕ್ಕೆ ಪ್ರಬಲ ಹೊಡೆತ ನೀಡಿದರು. ಒಂದು ಕಡೆಯಿಂದ ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದ ಸ್ಮಿತ್ 59 ರನ್ ಗಳಿಸಿದ ವೇಳೆ ಪಾಂಡ್ಯ ಎಸೆತದಲ್ಲಿ ಔಟಾಗುತ್ತಲೇ ಆಸ್ಟ್ರೇಲಿಯದ ಸೋಲು ಖಚಿತವಾಗತೊಡಗಿತು. ಕೊಹ್ಲಿ ಮತ್ತು ರಹಾನೆ ಅವರ ಜವಾಬ್ದಾರಿಯ ಆಟದಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿದರು. ಸರಾಸರಿ ಐದರಂತೆ ರನ್ ಪೇರಿಸಿದ ಇವರಿಬ್ಬರು ದ್ವಿತೀಯ ವಿಕೆಟಿಗೆ ಕೇವಲ 111 ಎಸೆತಗಳಲ್ಲಿ 102 ರನ್ ಪೇರಿಸಿದರು. 20ನೇ ಓವರ್ನಲ್ಲಿ ಭಾರತದ ನೂರು ರನ್ ದಾಖಲಾಗಿತ್ತು. ಹೀಗೆ 50 ರನ್ ಗಳ ಅಂತರದಿಂದ ರೋಚಕ ಭಾರತ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ರೋಚಕ ದಿಗ್ವಿಜಯ ಸಾಧಿಸಿತು.
Comments