ಶ್ರೀಶಾಂತ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ : ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಮೇಲೆ ಹೇರಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕೇರಳ ಹೈಕೋರ್ಟ್ ಗೆ ಸ್ಪಷ್ಟಪಡಿಸಿತ್ತು.
ಕೇರಳ ಹೈಕೋರ್ಟಿನ ಏಕಸದಸ್ಯ ಪೀಠವು ಶ್ರೀಶಾಂತ್ ಮೇಲಿನ ನಿಷೇಧ ಹಿಂಪಡೆಯುವಂತೆ ಬಿಸಿಸಿಐಗೆ ನಿರ್ದೇಶಿಸಿತ್ತು. ಶ್ರೀಶಾಂತ್ ಇಂಡಿಯನ್ ಕ್ರಿಕೆಟ್ ನಿಂದ ದೂರವುಳಿಯುವಂತೆ ಆಜೀವ ನಿಷೇಧ ಹೇರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆದೇಶ ಹೊರಡಿಸಿದೆ. 34 ವರ್ಷ ವಯಸ್ಸಿನ ವೇಗಿ ಶ್ರೀಶಾಂತ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. ಶ್ರೀಶಾಂತ್, ಅಂಕಿತ್ ಚಾವಣ್, ಅಜಿಂತ್ ಚಾಂಡಿಲ ಸೇರಿದಂತೆ 36 ಮಂದಿ ಆರೋಪಿಗಳಿಗೆ ಸ್ಪಾಟ್ ಫಿಕ್ಸಿಂಗ್ ನಿಂದ 2015ರ ಜುಲೈ ತಿಂಗಳಿನಲ್ಲಿ ಪಟಿಯಾಲ ಹೌಸ್ ಕೋರ್ಟಿನಿಂದ ಖುಲಾಸೆ ಸಿಕ್ಕಿದೆ. ಆದರೆ, ಬಿಸಿಸಿಐ ಶಿಸ್ತು ಪಾಲಿನ ಸಮಿತಿ ಮಾತ್ರ ತನ್ನ ಕಾನೂನು ಸಮರ ಮುಂದುವರೆಸಿದೆ.
Comments