ಕೊಹ್ಲಿ ಮ್ಯಾರಿ ಮೀ, ಪಾಕಿಸ್ತಾನ ಅಧಿಕಾರಿಯೊಬ್ಬರಿಂದ ಕೊಹ್ಲಿಗೆ ಮದುವೆ ಪ್ರಪೋಸಲ್

ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಆರಾಧಕರಿದ್ದಾರೆ. ಕೊಹ್ಲಿ ಯುವಕರು ಹಾಗೂ ಯುವತಿಯರು ಹೆಚ್ಚು ಅಭಿಮಾನಿಗಳಿದ್ದಾರೆ. ಕೊಹ್ಲಿಗೆ ಯುವತಿಯರು ಮದುವೆಯಾಗಲು ಸಾಲು ಸಾಲು ನಿಲ್ಲುತ್ತಾರೆ.
ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಆರಾಧಕರಿದ್ದಾರೆ. ಕೊಹ್ಲಿ ಯುವಕರು ಹಾಗೂ ಯುವತಿಯರು ಹೆಚ್ಚು ಅಭಿಮಾನಿಗಳಿದ್ದಾರೆ. ಕೊಹ್ಲಿಗೆ ಯುವತಿಯರು ಮದುವೆಯಾಗಲು ಸಾಲು ಸಾಲು ನಿಲ್ಲುತ್ತಾರೆ. ತಮಾಷೆ ಅಂದರೆ ಇಲ್ಲೊಬ್ಬ ಪಾಕಿಸ್ತಾನದ ಅಭಿಮಾನಿಯೊಬ್ಬರು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಮದುವೆಯಾಗುವಂತೆ ಕೇಳಿಕೊಂಡಿದ್ದಾರಂತೆ.
ವಿಶ್ವ ಇಲೆವೆನ್ ಜತೆ ಟಿ20 ಪಂದ್ಯವಾಡುತ್ತಿರುವ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳೂ ಕೊಹ್ಲಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ ಅದಕ್ಕೂ ಮೀರಿದ ಘಟನೆಯೊಂದು ನಡೆದಿದೆ.ವಿಶ್ವ ಇಲೆವೆನ್ ತಂಡದ ಜತೆಗಿನ ಪಂದ್ಯ ನಡೆಯುತ್ತಿದ್ದ ಗದಾಫಿ ಮೈದಾನದಲ್ಲಿ ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ಬ್ಯಾನರ್ ಹಿಡಿದಿರುವ ಫೋಟೋ ಒಂದು ಈಗ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗಿದ್ದು, ‘ಕೊಹ್ಲಿ ನನ್ನ ಮದುವೆಯಾಗುತ್ತೀರಾ?’ (ಕೊಹ್ಲಿ ಮ್ಯಾರಿ ಮಿ!) ಎಂದು ಆಂಗ್ಲ ಭಾಷೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಿಡಿದಿರುವ ಬ್ಯಾನರ್ ನಲ್ಲಿ ಬರೆಯಲಾಗಿತ್ತು. ಇದನ್ನು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರೇ ಟ್ವೀಟ್ ಮಾಡಿದ್ದಾರೆ. ಇದೀಗ ಟ್ವಿಟರ್ ನಲ್ಲಿ ತಮಾಷೆಯ ವಸ್ತುವಾಗಿದೆ.
ಅಸಲಿಗೆ ಇದು ಪೊಲೀಸ್ ಅಧಿಕಾರಿಯದ್ದೇ ಬಿತ್ತಿಪತ್ರನಾ ಅಥವಾ ಇನ್ನೊಬ್ಬರ ಬಿತ್ತಿಪತ್ರವನ್ನು ಅವರು ಹಿಡಿದುಕೊಂಡಿದ್ದರೋ ಗೊತ್ತಿಲ್ಲ. ಅಂತೂ ವಿರಾಟ್ ಕೊಹ್ಲಿ ಮದುವೆ ಪ್ರಪೋಸಲ್ ಮಾಡಿರುವ ಪಾಕ್ ಅಭಿಮಾನಿಯೊಬ್ಬರ ಸುದ್ದಿ ಚರ್ಚೆಯಾಗುತ್ತಿದೆ.
Comments