ಗುರುವಿನ ಮಾರ್ಗದರ್ಶನ ಪಡೆಯಲಿರುವ ಸೈನಾ ನೆಹ್ವಾಲ್
ನವದೆಹಲಿ: ಭಾರತೀಯ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗುರುವಿಗೆ ಪ್ರಮುಖ ಸ್ಥಾನವಿದೆ. ಗುರುವಿನ ಪರಂಪರೆ ಮುಗಿಯುವುದಂಥಲ್ಲ. ವಿಶೇಷವೆಂದರೆ, ಕ್ರೀಡಾ ಕ್ಷೇತ್ರದಲ್ಲಿ ಮುಖ್ಯವಾಗಿ ಗುರುವಿನ ಮಾರ್ಗದರ್ಶನ ಇರಲೇಬೇಕು..
ನವದೆಹಲಿ: ಭಾರತೀಯ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗುರುವಿಗೆ ಪ್ರಮುಖ ಸ್ಥಾನವಿದೆ. ಗುರುವಿನ ಪರಂಪರೆ ಮುಗಿಯುವುದಂಥಲ್ಲ. ವಿಶೇಷವೆಂದರೆ, ಕ್ರೀಡಾ ಕ್ಷೇತ್ರದಲ್ಲಿ ಮುಖ್ಯವಾಗಿ ಗುರುವಿನ ಮಾರ್ಗದರ್ಶನ ಇರಲೇಬೇಕು.. ಸಾಧನೆ ಮಾಡಿದವರಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದ ಪ್ರತಿಭಾವಂತ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಒಬ್ಬರು. ಈಗ ಸೈನಾ ನೆಹ್ವಾಲ್ ತಮ್ಮ ಭವಿಷ್ಯದ
ಗುರಿಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಮತ್ತೆ ಮಾಜಿ ಕೋಚ್ ಪುಲ್ಲೇಲ್ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸೈನಾ ನೆಹ್ವಾಲ್ ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಮತ್ತೊಮ್ಮೆ ಗೋಪಿಚಂದ್ ಅಕಾಡೆಮಿಗೆ ಸೇರಲು ಯೋಚಿಸುತ್ತಿದ್ದು, ಈ ಬಗ್ಗೆ ಗೋಪಿ ಸರ್ ಬಳಿ ಮಾತುಕತೆ ನಡೆಸಿದ್ದೇನೆ ನನಗೆ ಮತ್ತೆ ಸಹಾಯ ಮಾಡಲು ಒಪ್ಪಿಕೊಂಡ ಅವರಿಗೆ ನನ್ನ ಧನ್ಯವಾದಗಳು ಎಂದು ಸೈನಾ ಟ್ವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದ ಹಂತದಲ್ಲಿ ನನ್ನ ಗುರಿ ಸಾಧಿಸಲು ಅವರು ಸಹಾಯ ಮಾಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.
Comments