4ನೇ ಏಕದಿನ ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ 168 ರನ್ ಗಳ ಭರ್ಜರಿ ಜಯ

01 Sep 2017 9:42 AM | Sports
345 Report

ಕೊಲಂಬೋ: ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 168 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ನೀಡಿದ 376 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 42.4 ಓವರ್ ಗಳಲ್ಲಿಯೇ ಕೇವಲ  207 ರನ್ ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ ಭಾರತದ ಎದುರು 168 ರನ್ ಗಳ ಅಂತರದಿಂದ ಮತ್ತೆ  ಶರಣಾಯಿತು.

ಶ್ರೀಲಂಕಾ ಪರ ಎಂಜಲೋ ಮ್ಯಾಥ್ಯೂಸ್ (70 ರನ್) ಮತ್ತು ಮಿಲಿಂಡಾ ಸಿರಿವರ್ಧನಾ (39 ರನ್) ಅವರನ್ನು ಹೊರತು  ಪಡಿಸಿದರೆ, ಇತರೆ ಬ್ಯಾಟ್ಸಮನ್ ಗಳಿಂದ ಅಂತಹ ಪ್ರಭಾವಿ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ಭಾರತೀಯ  ಬೌಲರ್ ಗಳ ಸಾಂಘಿಕ ಹೋರಾಟದ ಎದುರ ಲಂಕಾ ಬ್ಯಾಟಿಂಗ್ ಪಡೆ ಕಳೆಗುಂದಿದಂತೆ ಕಂಡಿತು. 

ಭಾರತೀಯ ವೇಗದ ಬೌಲರ್ ಗಳು ಶ್ರೀಲಂಕಾದ ರನ್ ವೇಗಕ್ಕೆ ಕಡಿವಾಣ ಹಾಕಿದ್ದಲ್ಲದೇ ಕ್ರಮೇಣ ವಿಕೆಟ್  ಕಬಳಿಸುವುದರೊಂದಿಗೆ ಶ್ರೀಲಂಕಾ ಪಡೆ ಮೇಲೆ ಒತ್ತಡ ಹೇರಿದರು. ಅಂತಿಮವಾಗಿ ಶ್ರೀಲಂಕಾ ತಂಡ 42.4 ಓವರ್  ಗಳಲ್ಲಿ 207 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಆ ಮೂಲಕ ಭಾರತದ ಎದುರು 168 ರನ್ ಗಳ ಬೃಹತ್ ಅಂತರದ  ಸೋಲು ಕಂಡಿತು.

ಆಕರ್ಷಕ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ನಾಯಕ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ  ಪ್ರಶಸ್ತಿಗೆ ಭಾಜನರಾದರು.

Courtesy: Kannadaprabha

Comments