ಆರೋಪಿ ರಾಮ್ ರಹೀಮ್ ಸಿಂಗ್ ಆಶೀರ್ವಾದ ಪಡೆಯುತ್ತಿರುವ ವಿರಾಟ್ ಕೊಹ್ಲಿ ಫೊಟೋ ವೈರಲ್ !

ಚಂಡೀಗಢ್ : ನಾನು ಕೋಚಿಂಗ್ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದೇನೆ, ರಾಷ್ಟ್ರಮಟ್ಟದ 32ಕ್ಕೂ ಅಧಿಕ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ನನ್ನ ಬಳಿ ವಿರಾಟ್ ಕೊಹ್ಲಿ ಬಂದಿದ್ದರು, ಅದಕ್ಕೆ ಸಂಬಂಧಿಸಿದ ವಿಡಿಯೋ ನನ್ನ ಹತ್ತಿರ ಇದೆ ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಆರೋಪಿ, ಡೆರಾ ಸಚಾ ಸೌದ ಸಂಸ್ಥೆಯಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಾಂಬ್ ಸಿಡಿಸಿದ್ದಾರೆ.
ಚಂಡೀಗಢ್ : ಲೈಂಗಿಕ ಶೋಷಣೆ ಆರೋಪ ಹೊ್ತ್ತಿರುವ ಗುರ್ಮೀತ್ ರಾಮ್ ರಹೀಮ್ ಹತ್ತಿರ ವಿರಾಟ್ ಕೊಹ್ಲಿ ಆಶೀರ್ವಾದ ಪಡೆಯುತ್ತಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾನು ಕೋಚಿಂಗ್ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದೇನೆ, ರಾಷ್ಟ್ರಮಟ್ಟದ 32ಕ್ಕೂ ಅಧಿಕ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ನನ್ನ ಬಳಿ ವಿರಾಟ್ ಕೊಹ್ಲಿ ಬಂದಿದ್ದರು, ಅದಕ್ಕೆ ಸಂಬಂಧಿಸಿದ ವಿಡಿಯೋ ನನ್ನ ಹತ್ತಿರ ಇದೆ ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಆರೋಪಿ, ಡೆರಾ ಸಚಾ ಸೌದ ಸಂಸ್ಥೆಯಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಾಂಬ್ ಸಿಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ತರಬೇತಿ ನೀಡಿದ್ದೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. 2016ರ ಸೆಪ್ಟೆಂಬರ್ ನಲ್ಲಿ ಸಮಾರಂಭದಲ್ಲಿ ಮಾತನಾಡಿರುವ ಸಂದರ್ಭದಲ್ಲಿ ಹೇಳಿದ್ದಾರೆ. ನಾನು ತರಬೇತಿ ನೀಡಿರುವ ಹಲವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಾಕ್ಸರ್ ವಿಜೇಂದರ್ ಸಿಂಗ್ ದೇಶಕ್ಕಾಗಿ ಅನೇಕ ಮೆಡಲ್ ಗಳನ್ನು ತಂದುಕೊಟ್ಟಿದ್ದಾರೆ. ಅನೇಕ ವಿಷಯಗಳನ್ನು ಕಲಿಯಲು ವಿರಾಟ್ ಕೊಹ್ಲಿ ನನ್ನ ಬಳಿ ಬಂದಿದ್ದರು, ಇದಕ್ಕೆ ಸಂಬಂಧಿಸಿದ ವಿಡಿಯೋ ಇದೆ. ಕೊಹ್ಲಿ ವಿಶ್ವದಲ್ಲೇ ಉತ್ತಮ ಆಟಗಾರ ಎಂದು ಗುರ್ಮೀತ್ ಸಿಂಗ್ ರಹೀಮ್ ಹೇಳಿದ್ದಾರೆ.
Comments