ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ 88 ಮಿಲಿಯನ್ ಡಾಲರ್

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ ಸುಮಾರು 575 ಕೋಟಿ ರುಪಾಯಿಗೆ ಏರಿಗೆಯಾಗಿದೆ.
ಐಪಿಎಲ್ 10ನೇ ಆವೃತ್ತಿ ಯಾವುದೇ ವಿವಾದಗಳಿಲ್ಲದೆ ಪೂರ್ಣಗೊಂಡಿತ್ತು. ಇದೀಗ ಕಾರ್ಪೋರೇಟ್ ಹಣಕಾಸು ಸಂಸ್ಥೆಯೊಂದು ತಂಡಗಳ ಬ್ರ್ಯಾಂಡ್ ಮೌಲ್ಯಗಳ ಕುರಿತು ಮಾಹಿತಿ ಒದಗಿಸಿದ್ದು ಇದರಲ್ಲಿ ಆರ್ಸಿಬಿ ತಂಡ ಮೂರನೇ ಸ್ಥಾನದಲ್ಲಿದೆ. ಇನ್ನು ಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಬ್ರ್ಯಾಂಡ್ ಮೌಲ್ಯ 106 ಮಿಲಿಯನ್ ಡಾಲರ್ ಇದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೌಲ್ಯ 99 ಮಿಲಿಯನ್ ಡಾಲರ್ ಇದೆ. ಇದೇ ವೇಳೆ ಐಪಿಎಲ್ ನ ಬ್ರ್ಯಾಂಡ್ ಮೌಲ್ಯದಲ್ಲಿ ಶೇಖಡ 13.9ರಷ್ಟು ಏರಿಕೆ ಕಂಡ ಬಂದಿದ್ದು, ಸುಮಾರು 34 ಸಾವಿರ ಕೋಟಿಯಷ್ಟು ಏರಿಕೆಯಾಗಿದೆ.
Comments