ಕನ್ನಡಿಗರಿಬ್ಬರಿಗೆ ಅರ್ಜುನ್ ಪ್ರಶಸ್ತಿ
ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಎಸ್. ವಿ ಸುನೀಲ್ ಹಾಗೂ ಶೂಟರ್ ಪಿ.ಎನ್ ಪ್ರಕಾಶ್ ಆಯ್ಕೆ ಆಗಿದ್ದಾರೆ.
2017 ನೇ ಸಾಲಿನಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಅರ್ಜುನ್ ಪ್ರಶಸ್ತಿ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಹಾಕಿ ಆಟಗಾರ ಎಸ್.ವಿ ಸುನೀಲ್ ಹಾಗೂ ಶೂಟರ್ ಪಿ.ಎನ್ ಪ್ರಕಾಶ್ ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಇಬ್ಬರು, ದ್ರೋಣಾಚಾರ್ಯ ಪ್ರಶಸ್ತಿಗೆ 7 ಮಂದಿ . ಅರ್ಜುನ್ ಪ್ರಶಸ್ತಿಗೆ 17 ಮಂದಿ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗೆ 3 ಮಂದಿ ಆಯ್ಕೆ ಆಗಿದ್ದಾರೆ. ಇದೇ 29ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪದಕ ಹಾಗೂ ಪ್ರಶಸ್ತಿಯ ಜತೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರಿಗೂ ರೂ 75 ಲಕ್ಷ ನಗದು ಹಾಗೂ ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ವಿಜೇತರಿಗೆ ರೂ. 5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
Comments