ಗೆಳತಿ ಅನುಷ್ಕಾ ಶರ್ಮಾ ಜತೆಗೂಡಿ ‘ಸಸಿ ನೆಟ್ಟ’ ವಿರಾಟ್ ಕೊಹ್ಲಿ

ನವದೆಹಲಿ : ಶ್ರೀಲಂಕಾ ಜತೆಗೆ ಟೆಸ್ಟ್ ಸರಣಿ ಇಂದು ನಡೆಯುವ ಮೊದಲ ಒನ್ ಡೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ತನ್ನ ಗೆಳತಿ ಅನುಷ್ಕಾ ಜತೆ ಸೇರಿ ಒಂದು ಉತ್ತಮ ಕೆಲಸ ಮಾಡಿರುವುದು ತಿಳಿದು ಬಂದಿದೆ.
ಸದ್ಯ ಶ್ರೀಲಂಕಾದಲ್ಲಿರುವ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಹಾಲಿಡೇ ಮೂಡನಲ್ಲಿ ಅನುಷ್ಕಾ ಜತೆಯಾಗಿ ಕೈಹಿಡಿದುಕೊಂಡು ಸುತ್ತುತ್ತಿರುತ್ತಾರೆ. ಆದ್ರೆ ಇವತ್ತು ಅನುಷ್ಕಾ ಜತೆಗೂಡಿ ವಿರಾಟ್ ಕೊಹ್ಲಿ ಶ್ರೀಲಂಕಾದಲ್ಲಿ ಪಂದ್ಯಕ್ಕೂ ಮುನ್ನ ಸಸಿಯೊಂದನ್ನು ನೆಟ್ಟಿದ್ದಾರೆ. ಇಬ್ಬರು ಜತೆಯಾಗಿ ಸಸಿ ನೆಡುವುದು, ಸಸಿಗೆ ನೀರು ಹಾಕುತ್ತಿರುವ ಫೊಟೋ ವೈರಲ್ ಆಗಿದೆ. ಇದನ್ನು ನೋಡಿದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಅಭಿಮಾನಿಗಳಂತೂ ಖುಷಿ ಆಗಿದ್ದಾರೆ.
Comments