ಕೊಹ್ಲಿ ಹೇಳಿದ್ದಕ್ಕೆಲ್ಲಾ ಬಿಸಿಸಿಐ ಮಾತು ಕೇಳಿದ್ದೇಕೆ ?

ಮುಂಬೈ: ಅನಿಲ್ ಕುಂಬ್ಳೆ ಕೋಚ್ ಹುದ್ದೆ ತ್ಯಜಿಸಿಯಾಗಿದೆ. ಆ ವಿವಾದ ಇನ್ನೂ ಹಸಿಯಾಗಿಯೇ ಇದೆ.ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೊಹ್ಲಿ ಹೇಳಿದ್ದಕ್ಕೆಲ್ಲಾ ಬಿಸಿಸಿಐ ಅಸ್ತು ಎಂದಿದ್ದೇಕೆ ಎಂದು ಕಿಡಿ ಕಾರಿದ್ದಾರೆ.
‘ನಾನು ಆಡುವಾಗ ನಾಯಕ ಕೋಚ್ ಆಯ್ಕೆ ವಿಚಾರದಲ್ಲಿ ಮೂಗು ತೂರಿಸುವಂತಿರಲಿಲ್ಲ. ಬಿಸಿಸಿಐ ಯಾರನ್ನು ಆಯ್ಕೆ ಮಾಡುತ್ತೋ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿತ್ತು.
ಆದರೆ ಈಗ ಹಾಗಲ್ಲ. ಎಲ್ಲವೂ ಬದಲಾಗಿದೆ ಎಂದು ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ನಮಗೆ ನಾಯಕನಾಗಿ ಬೇಕಾದ ಆಟಗಾರ ಸಿಗಲ್ಲ. ಹಾಗಂತ ನೀವು ಆ ಪರಿಸ್ಥಿತಿಯಲ್ಲಿ ಆಡಲು ಸಾಧ್ಯವಿಲ್ಲ ಎನ್ನಲುಸಾಧ್ಯವಿಲ್ಲ. ನನಗೆ ಕುಂಬ್ಳೆ ಚೆನ್ನಾಗಿ ಗೊತ್ತು. ಆತ ವಿಪರೀತ ಒತ್ತಡ ನೀಡುವ ಮನುಷ್ಯ ಅಲ್ಲ. ಬಹುಶಃ ತನ್ನ ಗೌರವಕ್ಕೆ ಧಕ್ಕೆ ಬರುವ ಮೊದಲೇ ಕುಂಬ್ಳೆ ರಾಜೀನಾಮೆ ನೀಡಲು ಬಯಸಿರಬೇಕು ಎಂದು ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
Comments