ಮತ್ತೊಮ್ಮೆ ಟ್ರಾಲ್ ಗೆ ಒಳಗಾದ ಕ್ರಿಕೆಟಿಗ ಇರ್ಫಾನ್ ಪಠಾಣ್
ಈ ಹಿಂದೆ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡ್ ಆಟಗಾರ ಇರ್ಫಾನ್ ಪಠಾಣ್ ಈಗ ಮತ್ತೆ ಟ್ರಾಲ್‌ಗೆ ಒಳಗಾಗಿದ್ದಾರೆ. ಪಠಾಣ್ ಕೈಗೆ ರಾಖಿ ಕಟ್ಟಿಕೊಂಡಿರುವ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಇರ್ಫಾನ್ ತಂದೆ ಓರ್ವ ಮೌಲ್ವಿಯಾಗಿದ್ದಾರೆ. ಆದರೂ ಕ್ರಿಕೆಟಿಗರು ಇಸ್ಲಾಂ ವಿರೋಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವರು ದೂರಿದ್ದಾರೆ. ರಾಖಿ ಹಬ್ಬದ ಹಿನ್ನೆಲೆಯಲ್ಲಿ ಇರ್ಫಾನ್ ಪಠಾಣ್ ಕೈಗೆ ರಾಖಿ ಕಟ್ಟಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿ, ಶುಭಾಶಯ ತಿಳಿಸಿದ್ದರು.
ಇರ್ಫಾನ್ ಪಠಾಣ್ ಮುಸ್ಲಿಂ ಆಗಿದ್ದರೂ ರಾಖಿ ಕಟ್ಟಿಕೊಂಡಿದ್ದೇಕ್ಕೆ? ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಖಿ ಕಟ್ಟಿಕೊಂಡಿದ್ದರ ಸಂಬಂಧ ಇರ್ಫಾನ್ ಪಠಾಣ್ ಅವರನ್ನು ಅನೇಕರು ಟ್ವಿಟ್ಟರ್‌ನಲ್ಲಿ ಅನೇಕರು ಪ್ರಶ್ನೆ ಮಾಡಿದ್ದಾರೆ.
Comments