ಕೊಹ್ಲಿಯ ನಡತೆ ನೋಡಿದರೆ ರಿಚರ್ಡ್ಸ್ ನೆನಪಾಗುತ್ತಾರೆ’
ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಠವಾದಿ ನಡತೆಗೆ ಹೆಸರುವಾಸಿ. ಅಂತಿಪ್ಪ ಕೊಹ್ಲಿ ನಡತೆ ನೋಡಿದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ವಿವಿ ರಿಚರ್ಡ್ಸ್ ನೆನಪಾಗುತ್ತಾರೆ ಎಂದು ಶ್ರೀಲಂಕಾದ ಮಾಜಿ ಆಟಗಾರ ಅರವಿಂದ್ ಡಿ ಸಿಲ್ವಾ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿ ಸಿಲ್ವಾ ‘ವಿರಾಟ್ ಕೊಹ್ಲಿಗಿರುವ ಸೊಕ್ಕು ನೋಡಿದರೆ ರಿಚರ್ಡ್ಸ್ ನೆನಪಾಗುತ್ತಾರೆ’ ಎಂದಿದ್ದಾರೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್ ಭಾರತೀಯ ಕ್ರಿಕೆಟ್ ನ್ನು ಹೊಸ ದಾರಿಗೆ ತಂದರು. ಕೊಹ್ಲಿ ಅದನ್ನೇ ಮುಂದುವರಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೊಹ್ಲಿಯನ್ನು ನೋಡುವಾಗಲೆಲ್ಲಾ ಆಸ್ಟ್ರೇಲಿಯನ್ನರ ಸೊಕ್ಕನ್ನು ಆಸ್ಟ್ರೇಲಿಯಾದಲ್ಲೇ ಮುರಿದ ರಿಚರ್ಡ್ಸ್ ನೆನಪಾಗುತ್ತಾರೆ ಎಂದಿದ್ದಾರೆ.
Comments