ಕೆಪಿಎಲ್ 6ನೇ ಸೀಸನ್ ಕಿಚ್ಚ ಸುದೀಪ್, ಟೀಮ್ ಔಟ್
ಬೆಂಗಳೂರು : ಕೆಪಿಎಲ್ 6ನೇ ಸೀಸನ್ ನಿಂದ ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ರಾಕ್ ಸ್ಯಾರ್ಸ್ ತಂಡ ಹೊರ ಬಿದ್ದಿದೆ. ಈ ಮೂಲಕ ಸಿನಿಮಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿದೆ.
ಕಳೆದ ಮೂರು ವರ್ಷಗಳ ಕೆಪಿಎಲ್ ನಲ್ಲಿ ಆಡುವಂತೆ ರಾಕ್ ಸ್ವಾರ್ಸ್ತಂಡದೊಂದಿಗೆ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ವರ್ಷ ಆಡಿಸಲಾಗಿತ್ತು. ಈ ಸಲ ಸುದೀಪ್ ತಂಡವನ್ನು ಆಹ್ವಾನಿಸಿಲ್ಲ. ಹೊಸ ಬಿಡ್ ನೊಂದಿಗೆ ಹೊಸ ತಂಡಗಳನ್ನು ಸಿದ್ಧಪಡಿಸಿದ್ದೇವೆ ಹೀಗಾಗಿ ಈ ಸಲ 7 ತಂಡಗಳು ಕೆಪಿಎಲ್ ನಲ್ಲಿ ಆಡಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಕ್ ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಟೂರ್ನಿಯಿಂದ ಔಟ್ ಆದರೆ ಕಲ್ಯಾಣಿ ಬ್ಲಾಸ್ಟರ್ಸ್ ಎಂಬ ಹೊಸ ತಂಡವು ಸೇರ್ಪಡೆಯಾಗಿವೆ. ಕಲ್ಯಾಣಿ ಮೋಟಾರ್ಸ್ ತಂಡವು ಈ ಸೀಸನ್ ನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ.
Comments