ಕೊಲಂಬೊ ಟೆಸ್ಟ್:ಅಶ್ವಿನ್ ಹೊಸ ದಾಖಲೆ,ಭಾರತ 622 ಕ್ಕೆ ಡಿಕ್ಲೇರ್
ಇಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2 ನೇ ಪಂದ್ಯದ ಶುಕ್ರವಾರದ 2 ನೇ ದಿನದಾಟದಲ್ಲಿ ಪ್ರವಾಸಿ ಭಾರತ ಮೊದಲ ಇನ್ನಿಂಗ್ಸನ್ನು 622 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಲಂಕಾ ಆರಂಭಿಕ ಆಘಾತಕ್ಕೆ ಸಿಲುಕಿದೆ. ಖಾತೆ ತೆರೆಯುವ ಮುನ್ನವೆ ವಿಕೆಟ್ ಕಳೆದುಕೊಂಡಿದೆ.
ಮೊದಲ ದಿನದಾಟದಲ್ಲಿ 128 ರನ್ಗಳಿಸಿದ್ದ ಪೂಜಾರ 133 ರನ್ಗಳಿಗೆ ಔಟಾದರು.103 ರನ್ಗಳಿಸಿ ಆಟ ಮುಂದುವರಿಸಿದ ರೆಹಾನೆ 132 ಕ್ಕೆ ನಿರ್ಗಮಿಸಿದರು. ಆ ಬಳಿಕ ವೃದ್ಧಿಮಾನ್ ಸಾಹಾ 67 ,ಹಾರ್ದಿಕ್ ಪಾಂಡ್ಯಾ 20,ಮಹಮದ್ ಶಮಿ 19 ,ಉಮೇಶ್ ಯಾದವ್ 8 ರನ್ ಕೊಡುಗೆ ಸಲ್ಲಿಸಿದರು. ಜಡೇಜಾ 70 ರನ್ಗಳಿಸಿ ಅಜೇಯರಾಗಿ ಉಳಿದರು. ಲಂಕಾ ಪರ ಹೆರಾತ್ 4 ವಿಕೆಟ್ ಪಡೆದರು. 9 ವಿಕೆಟ್ ಕಳೆದುಕೊಂಡು 622 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಮಾಡಿಕೊಳ್ಳಲಾಯಿತು.
ಅಶ್ವಿನ್ ಹೊಸ ದಾಖಲೆ
ಭಾರತ ದ ಪ್ರಮುಖ ಸ್ಪಿನ್ನರ್‌ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್ನ ಹೊಸ ದಾಖಲೆಗೆ ಭಾಜನರಾಗಿದ್ದಾರೆ. ಕೊಲಂಬೊ ಟೆಸ್ಟ್ನಲ್ಲಿ 2 ನೇ ದಿನ ದಾಟದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದರು.ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದಲ್ಲಿ 2000 ರನ್ಗಳಿಸಿದ ದಾಖಲೆಗೆ ಆಲ್ರೌಂಡರ್ ಅಶ್ವಿನ್ ಭಾಜನರಾದರು. ಈಗಾಗಲೇ ಅತೀ ವೇಗದ 250 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದರು.54 ರನ್ಗಳಿಸಿ ಔಟಾದ ಅಶ್ವಿನ್ರದ್ದು ಇದು ಟೆಸ್ಟ್ನ 11 ನೇ ಅರ್ಧಶತಕ ವಾಗಿದೆ.
Comments