ಪುರುಷರ ಫುಟ್ಬಾಲ್ ಟೀಮ್ ಗೆ ಕೋಚ್ ಆಗಿ ಆಯ್ಕೆಯಾದ ಮಹಿಳೆ?!
ಪುರುಷರ ಫುಟ್ಬಾಲ್ ವಿಭಾಗಕ್ಕೆ ಮಹಿಳೆಯೊಬ್ಬರು ಕೋಚ್ ಆಗಿ ಆಯ್ಕೆ ಯಾಗಿದ್ದಾರೆ. ಪಾಕಿಸ್ತಾನದಲ್ಲಿ ಇಥದ್ದೊಂದು ಘಟನೆ ವರದಿಯಾಗಿದೆ. ಪಾಕ್ ನ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಟೀಮ್ ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರಹಿಲಾ ಎಂಬ ಮಹಿಳೆ ಈಗ ಪುರುಷರ ಫುಟ್ಬಾಲ್ ತಂಡಕ್ಕೆ ಕೋಚ್ ಆಗುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಮೂಲಕ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಪುರುಷರ ಫುಟ್ಬಾಲ್ ಟೀಮ್ ಗೆ ಆಯ್ಕೆಯಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ರಹಿಲಾ ಬಲೂಚಿಸ್ತಾನ್ ನಲ್ಲಿ ಚಿಕ್ಕವರಾಗಿದ್ದಾಗ ತಮ್ಮ ಸಹೋದರಿಯರ ಜತೆಗೆ ಫುಟ್ಬಾಲ್ ಆಡುವ ಅಭ್ಯಾಸ ಮಾಡುತ್ತಿದ್ದರು. ಅಂದು ಫುಟ್ಬಾಲ್ ಆಡಲು ಅವರಿಗೆ ಮೈದಾನವಿರಲಿಲ್ಲ. ಕಾಲೇಜು ಮೈದಾನದಲ್ಲಿ ಫುಟ್ಬಾಲ್ಅಭ್ಯಾಸ ಮಾಡುತ್ತಿದ್ದರು. ಈ ಹಂತಕ್ಕೆ ಬರಲು ರಹಿಲಾಗೆ ಹಲವು ಖ್ಯಾತ ಫುಟ್ಬಾಲ್ ಆಟಗಾರರೂ ಸ್ಫೂರ್ತಿಯಾಗಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Comments