2ನೇ ಟೆಸ್ಟ್ ː ಭಾರತ ಬ್ಯಾಟಿಂಗ್, ಶಿಖರ್ ಧವನ್ ಔಟ್

ಕೊಲಂಬೋ : ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗಾಲೆಯಲ್ಲಿ ಸುಲಭವಾಗಿ ಗೆದ್ದುಕೊಂಡಿದೆ. ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 3ರಿಂದ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ 56 ರನ್ ಆಗುವಷ್ಟರಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕಳೆದುಕೊಂಡಿದೆ. ಕೆಎಲ್ ರಾಹುಲ್ ಅವರು ಐದಾರು ತಿಂಗಳುಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಶ್ರೀಲಂಕಾ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ನಾಯಕ ದಿನೇಶ್ ಚಂಡಿಮಾಲ್, ಧನಂಜಯ ಡಿಸಿಲ್ವ ಹಾಗೂ ಮಲಿಂದಾ ಪುಷ್ಪಕುಮಾರ ಅವರು ಕಣಕ್ಕಿಳಿದಿದ್ದರೆ, ದನುಷ್ಕಾ ಗುಣತಿಲಕ, ಲಹಿರು ಕುಮಾರ, ಅಸೆಲ ಗುಣರತ್ನೆ ತಂಡದಿಂದ ಹೊರಗುಳಿದಿದ್ದಾರೆ. 2015ರಲ್ಲಿ ಇಲ್ಲಿ ಆಡಿದ್ದಾಗ ಶ್ರೀಲಂಕಾ ವಿರುದ್ಧ ಭಾರತ 117ರನ್ ಗಳ ಜಯ ದಾಖಲಿಸಿತ್ತು.ಅಂದು ಚೇತೇಶ್ವರ್ ಪೂಜಾರಾ ಹಾಗೂ ಇಶಾಂತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದರು.
Comments