ಬ್ಯಾಡ್ಮಿಂಟನ್ ತಾರೆ ಈಗ ಡೆಪ್ಯೂಟಿ ಕಲೆಕ್ಟರ್
ಹೈದರಾಬಾದ್: ರಿಯೋ ಒಲಂಪಿಕ್ ನ ಬೆಳ್ಳಿ ಪದಕ ವಿಜೇತೆ ಭಾರತದ ಭರವಸೆಯ ಬ್ಯಾಡ್ಮಿಟಂನ್ ತಾರೆ ಪಿ ವಿ ಸಿಂಧು ಅವರಿಗೆ ಆಂದ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಪಿ ವಿ ಸಿಂಧು ಅವರಿಗೆ ಸರ್ಕಾರದ ಆದೇಶ ಪತ್ರವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಪಿ ವಿ ಸಿಂಧು ತಮ್ಮ ಗಮನ ಕ್ರೀಡೆಗಳ ಬಗ್ಗೆ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.
ರಿಯೋ ಒಲಂಪಿಕ್ ನಲ್ಲಿ ಪಿ ವಿ ಸಿಂಧು ಬೆಳ್ಳಿ ಪದಕ ಗೆದ್ದಾಗ ಆಂಧ್ರ ಪ್ರದೇಶ ಸರ್ಕಾರ 3 ಕೋಟಿ ರೂ ನಗದು ಬಹುಮಾನ, ರಾಜಧಾನಿ ಅಮರಾವತಿಯಲ್ಲಿ 1000 ಚದರ ಅಡಿಯ ನಿವೇಶನ ಹಾಗೂ ಗ್ರೂಪ್-1 ಸೇವಾ ಹುದ್ದೆ ನೀಡುವುದಾಗಿ ಘೋಷೀಸಿತ್ತು. ಈ ನಿಟ್ಟಿನಲ್ಲಿ ಸಿಂಧು ಅವರಿಗೆ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಲಾಗಿದೆ.
Comments