2011ಕ್ಕಿಂತಲೂ ಮಹತ್ಸಾಧನೆ - ಗೌತಮ್ ಗಂಭೀರ್

ನವದೆಹಲಿ: ಐಸಿಸ್ ಮಹಿಳಾ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಒಂದು ವೇಳೆ ಜಯ ಸಾಧಿಸಿದರೆ ಆದರೆ ಅದು ಪುರುಷರ ತಂಡ 2011ರ ವಿಶ್ವಕಪ್ ನಲ್ಲಿ ಗೆಲುವು ಸಾಧಿಸುವುದಕ್ಕಿಂತಲೂ ಮಹತ್ತರ ಸಾಧನೆ ಯಾಗಲಿದೆ ಎಂದು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಮಹಿಳಾ ಕ್ರಿಕೆಟ್ ಬೆಂಬಲಿಸುವವರ ಸಂಖ್ಯೆ ಬಹಳ ಕಡಿಮೆ, ಸದ್ಯ ಮಹಿಳಾ ತಂಡ ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಕಪ್ ಗೆದ್ದರೆ, ಹಲವು ಹೆಣ್ಣು ಮಕ್ಕಳು ಕ್ರಿಕೆಟ್ ನತ್ತ ಮುಖ ಮಾಡಲಿದ್ದಾರೆ. 2011ರಲ್ಲಿ ನಡೆದ ಪುರುಷರ ವಿಶ್ವಕಪ್ ಭಾರತದಲ್ಲಿ ಆಯೋಜನೆಗೊಂಡಿತ್ತು, ಆದ್ರೆ ಮಹಿಳಾ ವಿಶ್ವಕಪ್ ಲಂಡನ್ ನಲ್ಲಿ ನಡೆಯುತ್ತಿದೆ. ಅಲ್ಲಿನ ವಾತಾವರಣ ತಂಡಕ್ಕೆ ಪೂರಕವಾಗಿಲ್ಲ. ಹಾಗಿದ್ದು ವನಿತೆಯರ ತಂಡ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
Comments