ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಗೆ ಕಿಚ್ಚಾ ಸುದೀಪ್

ಲಂಡನ್:ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತದ ವನಿತೆಯರು ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಾರೆ. ಲಾರ್ಡ್ಸ್ ನಲ್ಲಿ ನಡೆಯಲಿರುವಇಂದಿನ ಅಂತಿಮ ಹಣಾಹಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ. ಈ ಪಂದ್ಯವನ್ನು ನಟ ಕಿಚ್ಚ ಸುದೀಪ್ ವೀಕ್ಷಿಸಲಿದ್ದಾರೆ.
ದಿ ವಿಲನ್ ಚಿತ್ರದ ಶೂಟಿಂಗ್ ಸದ್ಯಕ್ಕೆ ಲಂಡನ್ ನಲ್ಲಿ ನಡೆಯುತ್ತಿದ್ದು, ಇಂದು ಭಾರತೀಯ ಕಾಲಮಾನ 3ಗಂಟೆಗೆ ಈ ಮ್ಯಾಚನ್ನು ಅವರು ಲಾರ್ಡ್ಸ್ ಮೈದಾನದಲ್ಲಿ ವೀಕ್ಷಿಸಲಿದ್ದಾರೆ.
ಈ ಕುರಿತು ಸ್ವತ: ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಮಹಿಳಾ ವಿಶ್ವಕಪ್ ನ್ನು ಎಂಜಾಯ್ ಮಾಡಲಿದ್ದೇವೆ.ಲಾರ್ಡ್ಸ್ ನಲ್ಲಿ ಈ ರೀತಿಯ ಹೆಮ್ಮೆಯ ಕ್ಷಣಗಳನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Comments