ಇಂದು ವನಿತಾ ವಿಶ್ವಕಪ್ ಫೈನಲ್
ಬೆಂಗಳೂರು: ಇಂದು ಭಾರತ- ಇಂಗ್ಲೆಂಡ್ ಮಹಿಳಾ ವಿಶ್ವಕಪ್ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇತಿಹಾಸ ನಿರ್ಮಿಸುವ ತವಕದಲ್ಲಿ ಭಾರತ ಇದ್ದು, ಇಂಗ್ಲೆಂಡ್ ವಿರುದ್ಧ ಗೆದ್ದಿರೋ ಭಾರತ ಈಗಲೂ ಫೇವರಿಟ್ ಆಗಿದೆ. ೧೯೮೩ರಲ್ಲಿ ಲಾರ್ಡ್ಸ್ ನಲ್ಲೇ ಕಪಿಲ್ ದೇವ್ ನ ಇತಿಹಾಸವನ್ನ ಮಿಥಾಲಿ ತಂಡ ಪುನರಾವರ್ತಿಸಲಿ ಎಂದು ಭಾರತದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಆಟಗಾರ್ತಿಯರಲ್ಲಿ ಹುಮ್ಮಸ್ಸು ತುಂಬಲು ಫೈನಲ್ ಗೂ ಮುನ್ನವೇ ಬಿಸಿಸಿಐ ತಲಾ 50 ಲಕ್ಷ ರೂ ಬಹುಮಾನ ನೀಡಿದೆ.
Comments