ಸಚಿನ್ ಬೇಕು ಎಂದು ಕೋಚ್ ರವಿಶಾಸ್ತ್ರಿ ಹೊಸ ಬೇಡಿಕೆ.!!
ಮುಂಬೈ : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಟೀಂ ಇಂಡಿಯಾದ ಮಾರ್ಗದರ್ಶಕರಾಗಿ ಹೊಂದಲು ಮುಖ್ಯ ಕೋಚ್ ರವಿಶಾಸ್ತ್ರಿ ಬಯಸಿದ್ದಾರೆ.
ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಶ್ರೀಧರ್ ಅವರನ್ನು ಪಡೆದ ಬಳಿಕ ಶಾಸ್ತ್ರಿ ಅವರು ತಮ್ಮ ತಂಡಕ್ಕೆ ಬಲ ನೀಡಲು ಮಾಸ್ಟರ್ ಬ್ಲಾಸ್ಟರ್ ಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
ಶ್ರೀಲಂಕಾಕ್ಕೆ ಭಾರತ ತಂಡವು ಬುಧವಾರದಂದು ಪ್ರಯಾಣ ಬೆಳೆಸಲಿದೆ. ಸಂಜಯ್ ಬಂಗಾರ್ ಅವರನ್ನು ಸಹಾಯಕ ಕೋಚ್ ಹುದ್ದೆಗೇರಿಸಲಾಗಿದೆ. ಆದರೆ, ರಾಹುಲ್ ದ್ರಾವಿಡ್ ಹಾಗೂ ಜಹೀರ್ ಖಾನ್ ಬಗ್ಗೆ ರವಿಶಾಸ್ತ್ರಿ ಅವರು ಯಾವುದೇ ನಿರ್ಣಯ ಕೈಗೊಂಡಿಲ್ಲ.
ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಪ್ರಮಾದವನ್ನು ಮುಚ್ಚಿ ಹಾಕಲು ರವಿಶಾಸ್ತ್ರಿ ಯತ್ನಿಸುತ್ತಿದ್ದು, ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸದಸ್ಯ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ತಂಡದ ಶಾಶ್ವತ ಸಲಹೆಗಾರ ಅಥವಾ ಮಾರ್ಗದರ್ಶಕರಾಗಿ ನೇಮಿಸುವಂತೆ ಬಿಸಿಸಿಐ ಮುಂದೆ ಮನವಿ ಮಾಡಿದ್ದಾರೆ.
Comments