ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾರ ಅಪ್ಪನ ಮೇಲೆ ಹಲ್ಲೆ

ನವದೆಹಲಿ: ರೋಹ್ಟಕ್ ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ಅಪ್ಪನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ಜೋಗಿಂದರ್ ಅವರ ಅಪ್ಪ 68ರ ಹರೆಯದ ಓಂ ಪ್ರಕಾಶ್ ರೋಹ್ಟಕ್ ಸಮೀಪದ ಕಥ್ ಮಂಡಿಯಲ್ಲಿರುವ ಅಂಗಡಿ ಇಂದ ಬಾಗಿಲು ಮುಚ್ಚಿ ಹೋರಡುತ್ತಿರುವ ಹೊತ್ತಿಗೆ ಬಂದ ದುಷ್ಕರ್ಮಿಗಳು ಹಣ ದೋಚಿ ಹಲ್ಲೆ ನಡೆಸಿದ್ದಾರೆ.
20ರ ಹರೆಯದ ಇಬ್ಬರು ಯುವಕರು ಬಂದು ಸಿಗರೇಟ್ ಮತ್ತು ತಂಪು ಪಾನೀಯ ಖರೀದಿಸಿ ಹೋಗಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮರಳಿ ಬಂದ ಅದೇ ಯುವಕರು ಓಂ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಓಂ ಪ್ರಕಾಶ್ ಅವರ ಆರೋಪ ಆಧರಿಸಿ ಹಲ್ಲೆ ನಡೆಸಿದ ಆಗಂತುಕರ ವಿರುದ್ಧ ಐಪಿಸಿ -342 ಮತ್ತು 379 ಬಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭವಾಗಿದ್ದು, ಸಿಸಿಟಿವಿ ದೃಶ್ಯಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Comments