ಟೀಮ್ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ಆಯ್ಕೆ
ತೀವ್ರ ಕುತೂಹಲದ ಮಧ್ಯೆ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ರೇಸ್ ಗೆ ಭಾರೀ ಕುತೂಹಲ
ಏರ್ಪಟ್ಟಿತ್ತು. ಇಂಡಿಯಾದ ಮಾಜಿ ಮ್ಯಾನೇಜರ್ ರವಿಶಾಸ್ತ್ರಿ ಮುಂದಿದ್ದರು.ಇಂದು ನಡೆದ ಸಂದರ್ಶನದಲ್ಲಿ 10 ಮಂದಿ ಆಕಾಂಕ್ಷಿಗಳನ್ನು ಸಂದರ್ಶನ ಮಾಡಲಾಗಿತ್ತು. ಕಡೆಯದಾಗಿ ರವಿಶಾಸ್ತ್ರಿ ಕೋಚ್ ಹುದ್ದೆಗೆ ಆಯ್ಕೆ ಆಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕುಂಬ್ಳೆ ಅವರಿಂದ ತೆರವಾಗಿರುವ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಹುದ್ದೆ ಅಲಂಕರಿಸಲಿದ್ದಾರೆ.
Comments