ಇಂಡಿಯಾ ಜತೆಗೆ ಕ್ರಿಕೆಟ್ ಸರಣಿ ಆಡಲಿದೆ ಈ ತಂಡ?
ಟೀಂ ಇಂಡಿಯಾ ಎಂಟು ವರ್ಷಗಳ ಬಳಿಕ ಶ್ರೀಲಂಕಾ ಜತೆ ಟೆಸ್ಟ್ ಏಕದಿನ ಮತ್ತು ಟಿ೨೦
ಕೊಲಂಬೋ: ಟೀಂ ಇಂಡಿಯಾ ಎಂಟು ವರ್ಷಗಳ ಬಳಿಕ ಶ್ರೀಲಂಕಾ ಜತೆ ಟೆಸ್ಟ್ ಏಕದಿನ ಮತ್ತು ಟಿ೨೦ ಸೇರಿದಂತೆ ಮೂರು
ಮಾದರಿಯಲ್ಲೂ ಸರಣಿಗಳನ್ನು ಆಡಲಿದೆ. ಟೀಂ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜುಲೈ ೨೬ರಂದು
ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ನಂತರ ಕೊಲಂಬೋ ಮತ್ತು ಕ್ಯಾಂಡಿಯಲ್ಲಿ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳು ಆಗಸ್ಟ್ ನಲ್ಲಿ ನಡೆಯಲಿವೆ.
ಆಗಸ್ಟ್ ೨೦ ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಏಕದಿನ ಪಂದ್ಯ ಡಮ್ಬುಲ್ಲಾದಲ್ಲಿ ನಡೆಯಲಿದೆ. ನಂತರದ
ಪಂದ್ಯಗಳು ಕ್ಯಾಂಡಿ ಮತ್ತು ಕೊಲಂಬೋದಲ್ಲಿ ನಡೆಯಲಿದೆ. ಇನ್ನು ಭಾರತ ವಿರುದ್ಧ ಶ್ರೀಲಂಕಾ ಒಂದು ಟಿ-೨೦ ಅಂತರಾಷ್ಟ್ರೀಯ
ಪಂದ್ಯವನ್ನಾಡುತ್ತಿದೆ. ಕೊಲಂಬೋದ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ ೬ರಂದು ನಡೆಯಲಿದೆ.
ಮೊದಲ ಟೆಸ್ಟ್ ಸರಣಿ - ಜುಲೈ ೨೬, ಗಾಲೆ ಮೈದಾನ
ದ್ವಿತೀಯ ಟೆಸ್ಟ್ - ಆಗಸ್ಟ್ ೩ ,
ತೃತೀಯ ಟೆಸ್ಟ್ - ಆಗಸ್ಟ್ ೧೨,
Comments