ಏಷ್ಯನ್ ಸ್ನೂಕರ್ ಚಾಂಪಿಯನ್,. ಭಾರತಕ್ಕೆ ಗೆಲುವು
ಬಿಷೆಕೆಕ್: ಏಷ್ಯನ್ ಟೀಮ್ ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಮುಂಚೂಣಿ ಆಟಗಾರ ಪಂಕಜ್ ಅಡ್ವಾಣಿ ಮತ್ತು ಲಕ್ಷಣ್
ರಾವತ್ ಅವರನ್ನೊಳಗೊಂಡ ತಂಡ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಪಂದ್ಯದಂಲ್ಲಿ ಅಡ್ವಾಣಿ 83 ಅಂಕ ಕಲೆಹಾಕುವ ಮೂಲಕ ಬೆಸ್ಟ್ ಆಫ್ ಫೈವ್ ಫೈನಲ್ ನಲ್ಲಿ ಎದುರಾಳಿ ಮೊಹಮ್ಮದ್ ಬಿಲಾಲ್
ವಿರುದ್ಧ ಅಮೋಘ ಜಯ ದಾಖಲಿಸಿದರು. ದ್ವಿತೀಯ ಪಂದ್ಯದಲ್ಲಿ ಸ್ಥಿರ ಆಟ ಕಾಯ್ದುಕೊಂಡ ಅಡ್ವಾಣಿ ಜತೆಗಾರ ಲಕ್ಷ್ಮಣ್ ವಿರಾಮ
ನೀಡದೇ 73 ಪಾಯಿಂಟ್ ಸಂಪಾದಿಸಿ ಎದುರಾಳಿ ಬಾಬರ್ ಮಾಸಿಶ್ ಗೆ ಖಾತೆ ತೆರಯಲು ಅವಕಾಶ ನೀಡದೇ
ಪಂದ್ಯವಶಪಡಿಸಿಕೊಂಡರು.
ಅಂತಿಮ ಪಂದ್ಯದಲ್ಲಿ ಭಾರತದ ಜೋಡಿ ಸಂಪೂರ್ಣ ಪಾರಮ್ಯ ಮೆರೆದು 3-0 (87-05,133-0,70-55) ಅಂತರದಲ್ಲಿ ಭಾರತ
ತಂಡಕ್ಕೆ ಜಯ ತಂದುಕೊಟ್ಟರು.
Comments