ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರು ವಿಂಬಲ್ಡನ್ ಆಡಿದ ಮ್ಯಾಂಡಿ ಮಿನೆಲ್ಲಾ!!

ಲಂಡನ್ :ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಲಕ್ಸಮ್ ಗ್ನ ಮ್ಯಾಂಡಿ ಮಿನೆಲ್ಲಾ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರು ಆಡಿ ಸಾಹಸ ಮರೆದಿದ್ದಾರೆ. ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿರುವ 31 ವರ್ಷದ ಮ್ಯಾಂಡಿ 1-6, 1-6 ರಿಂದ
ಇಟಲಿಯ ಫ್ರಾನ್ಸೆಸ್ಕಾ ಶಿಯಾವೊನ್ ವಿರುದ್ಧ ಸೋತರು ಪ್ರೇಕ್ಷಕರ ಗಮನ ಸೆಳೆದರು.
ಮುಂದಿನ ಸೆಪ್ಟೆಂಬರ್ ನಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನೀರಿಕ್ಷೆಯಲ್ಲಿರುವ ಸ್ಟಾರ್ ಆಟಗಾರ್ತಿ ಸೆರೇನಾ ವಿಲಿಯಮ್ಸ್ ಹಾಗೂ ಕಳೆದ ಡಿಸೆಂಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ವಾಪಸ್ಸಾಗಿರುವ ವಿಕ್ಟೋರಿಯಾ ಅಜರೆಂಕಾರಂಥ ‘ಟೆನಿಸ್ ಅಮ್ಮಂದಿರ’
ಸಾಲಿಗೆ ಮ್ಯಾಂಡಿ ಸೇರ್ಪಡೆಗೊಳ್ಳಲಿದ್ದಾರೆ.
ಈ ವರ್ಷ ವಿಂಬಲ್ಡನ್ ನನ್ನ ಕೊನೆಯ ಟೂರ್ನಿಯಾಗಿದೆ ಎಂದು ಮ್ಯಾಂಡಿ ಹೇಳಿಕೊಂಡಿದ್ದಾರೆ. ಅವರಿಗೆ ಪತಿ ಕೋಚ್ ಕೂಡ ಆಗಿದ್ದು,
ವಿಂಬಲ್ಡನ್ ಮಹಿಳಾ ಡಬಲ್ಸ್ ವಿಭಾಗದಲ್ಲಿ ಲಾತ್ವಿಯಾದ ಅನಾಸ್ತಾಸಿಜಾ ಸೆವಾಸ್ಟೊವಾ ಜತೆಗೂಡಿ ಕಣಕ್ಕಿಳಿಯಲಿದ್ದಾರೆ.
Comments