ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಜುಲೈ ೧೦ರಂದು
ಮುಂಬೈ: ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ಜುಲೈ 10 ರಂದು ನಡೆಯಲಿದೆ. ಈ ಕುರಿತು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಜುಲೈ 9 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಾದ ಬಳಿಕ ಜುಲೈ 10 ರಂದು ಮುಂಬೈಯಲ್ಲಿ ಸಂದರ್ಶನ ನಡೆಯುವುದು. ನಂತರ ನೂತನ ಕೋಚ್ ಯಾರೆಂದು ಘೋಷಿಸಲಾಗುವುದು ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಸದ್ಯಕ್ಕೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ದೊಡ್ಡ ಗಣೇಶ್ ಅರ್ಜಿ ಹಾಕಿರುವುದು ದೃಢಪಟ್ಟಿದೆ. ಇವರಲ್ಲದೆ, ರವಿ ಶಾಸ್ತ್ರಿ ಕೂಡಾ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಆದರೂ ಅದಿನ್ನೂ ಖಚಿತವಾಗಿಲ್ಲ. ಹಾಗಿದ್ದರೂ, ನಾಯಕ ವಿರಾಟ್ ಕೊಹ್ಲಿಗೆ ರವಿ ಶಾಸ್ತ್ರಿಗೆ ಹೆಚ್ಚಿನ ಒಲವಿದೆ ಎನ್ನಲಾಗಿದೆ.
Comments