ಕೋಚ್ ಹುದ್ದೆಗೆ ರವಿಶಾಸ್ತ್ರಿ ಅರ್ಜಿ?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿರ್ಧರಿಸುವುದಾಗಿ ಮಾಜಿ ಕೋಚ್ ರವಿಶಾಸ್ತ್ರಿ ಲಂಡನ್ ನಿಂದ ದೂರವಾಣಿ ಮೂಲಕ ತಿಳಿಸಿದ್ದಾರೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಾಗಿ ರವಿಶಾಸ್ತ್ರಿ ಅವರು ಬಹಿರಂಗವಾಗಿ ಹೇಳಿಕೆ ನೀಡಿರುವುದು ಇದೇ ಮೊದಲು. ಕೋಚ್ ಹುದ್ದೆಗೆ ಹೆಚ್ಚು ಜನರಿಂದ ಅರ್ಜಿಗಳನ್ನು ಕರೆಯಲು ಬಿಸಿಸಿಐ ಸೋಮವಾರ ನಿರ್ಧರಿಸಿತ್ತು. ಕಳೆದ ವರ್ಷ ಕೋಚ್ ಆಗಿದ್ದ ಶಾಸ್ತ್ರಿ ಅವರನ್ನು ಕಳೆದ ವರ್ಷ ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಮಾಜಿ ಆಲ್ ರೌಂಡರ್ ವೀಕ್ಷಕ ವಿವರಣೆಗಾರರಾಗಿರುವ ರವಿಶಾಸ್ತ್ರಿ ಜತೆ ನಾಯಕ ವಿರಾಟ್ ಕೊಹ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕನ್ನಡಿಗ ಅನಿಲ್ ಕುಂಬ್ಳೆ ಇತ್ತೀಚೆಗೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Comments