ICC ವಿಶ್ವಕಪ್ ಮಹಿಳಾ ಕ್ರಿಕೆಟ್ ಟೂರ್ನಿ: ಭಾರತ- ಇಂಗ್ಲೆಂಡ್ ಪಂದ್ಯ ಇಂದು
ಡರ್ಬಿ: ಐಸಿಸಿ ವಿಶ್ವಕಪ್ ಮಹಿಳಾ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ಮಧ್ಯೆ ಇಂದು ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನೇತೃತ್ವದ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.
1978ರಿಂದ ಇಲ್ಲಿಯವರೆಗೆ ಭಾರತ ತಂಡವು ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. 2005ರಲ್ಲಿ ರನ್ನರ್ಸ್ ಅಪ್ ಆಗಿದ್ದು ಮಾತ್ರ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆಯಾಗಿದೆ. ನೂರು ಪಂದ್ಯಗಳನ್ನು ಆಡಿರುವ ಅನುಭವಿ ಆಟಗಾರ್ತಿ ಮಿಥಾಲಿ ರಾಜ್, ಕರ್ನಾಟಕದ ವೇದಾ ಕೃಷ್ಣಮೂರ್ತಿ, ಆಲ್ ರೌಂಡರ್ ಪರ್ಮನ್ ಪ್ರೀತ್ ಸಿಂಗ್ , ಚತುಷ್ಕೋನ್ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಮೊದಲ ವಿಕೆಟ್ ಜತೆಯಾಟದಲ್ಲಿ 320 ರನ್ ಗಳನ್ನು ಸೇರಿಸಿ ದಾಖಲೆ ಬರೆದಿದ್ದ ದೀಪ್ತಿ ಶರ್ಮಾ ಹಾಗೂ ಪೂನಂ ರಾವುತ್, ಚೇತರಿಸಿಕೊಂಡು ಬಂದಿರುವ ಸ್ಮೃತಿ ಮಂದನಾ, ಮೋನಾ ಮೇಷ್ರಮ ಅವರು ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
Comments