ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ, ಪಿ.ವಿ ಸಿಂಧುಗೆ ಸೋಲು

24 Jun 2017 10:43 AM | Sports
482 Report

ಸಿಡ್ನಿ: ಆಸ್ಟ್ರೇಲಿಯಾದ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ ಸಿಂಧು ಸೋಲು ಅನುಭವಿಸಿದ್ದಾರೆ. ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ  ಆಟಗಾರ್ತಿ ವಿಶ್ವ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾ ತೈಪೆಯ ತೈಜುಯಿಂಗ್ ವಿರುದ್ಧ 21-10,20-22, 16-21ರಲ್ಲಿ ಪರಾಜಿತರಾಗಿದ್ದಾರೆ.

ಇದರಿಂದ ಸಿಂಧು ಟೂರ್ನಿಯಿಂದ ಹೊರ ಬಂದಿದ್ದಾರೆ. ಈ ಸೋಲಿನೊಂದಿಗೆಸಿಂಧು ತೈ ಎದುರು 7 ಪಂದ್ಯ ಸೋತಿದ್ದಾರೆ. ಗುರುವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು 21-13, 21-18ರಲ್ಲಿ  ನೇರ ಗೇಮ್ ಗಳಿಂದ ಚೀನಾದ ಚೆನ್ ಕ್ಸಿಯೊಕ್ಸಿನ್ ಎದುರು ಗೆದ್ದಿದ್ದರು.

Edited By

venki swamy

Reported By

Sudha Ujja

Comments