ಸೋತ ಮೇಲೂ ತಲೆ ಎತ್ತಿ ನಡೆಯುತ್ತೇನೆ- ವಿರಾಟ್ ಕೊಹ್ಲಿ
ಲಂಡನ್: ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸೋತರೂ ತಲೆ ಎತ್ತಿ ನಡೆಯುತ್ತೇನೆ, ಸೋಲಿನಿಂದ ಕುಗ್ಗಲಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿಶ್ವದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದಿರುವ ಅವರು, ಫೈನಲ್ ಪಂದ್ಯದಲ್ಲಿ ಜಯಗಳಿಸಿರುವ ಪಾಕ್ ತಂಡಕ್ಕೆ ಶುಭಕೋರುವೆ, ನಾವು ಫೈನಲ್ ನಲ್ಲಿ ಉತ್ತಮವಾಗಿ ಆಟವಾಡಿದ್ದೇವೆ. ಫೈನಲ್ ತಲುಪಲು ನಮ್ಮ ತಂಡದವರು ಪ್ರಯತ್ನ ಪಟ್ಟಿದ್ದಾರೆ ಎಂದರು.
ಇದೇ ವೇಳೆ ಮಾತನಾಡುತ್ತಿದ್ದ ಅವರು, ನಾನು ನನ್ನ ತಂಡದ ಸದಸ್ಯರ ಜತೆ ತಲೆ ಎತ್ತಿ ನಡೆಯಲು ಬಯಸುತ್ತೇನೆ. ನಮಗೆಲ್ಲಾ ಹೆಮ್ಮೆ ಪಡುವ ವಿಷಯ, ನನಗೆ ಗೊತ್ತು ಅಭಿಮಾನಿಗಳು ಎಷ್ಟೊಂದು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ ಎಂದು. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ನಮಗೆ ಆಟವಾಡಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನಲ್ಲಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
Comments