2020ರಂದು ಮುಂದಿನ ಐಸಿಸಿ ಟಿ20 ವಿಶ್ವಕಪ್?

ಲಂಡನ್ :ಐಸಿಸಿ ಟಿ೨೦ ವಿಶ್ವಕಪ್ ಪಂದ್ಯಾವಳಿ 2020ರಲ್ಲಿ ನಡೆಯುವ ಸಾಧ್ಯತೆ ಇದೆ. ಕ್ರಿಕೆಟ್ ರಂಗದ ಪ್ರಮುಖ ರಾಷ್ಟ್ರಗಳು 2018ರಲ್ಲಿ ದ್ವೀಪಕ್ಷೀಯ ಬದ್ಧತೆ ಹಾಗೂ ಒಪ್ಪಂದಗಳಿಗೆ ಒಳಪಡಲಿರುವ ಕಾರಣ ಟಿ20 ವಿಶ್ವಕಪ್ 2020ರಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಹೇಳಿಕೆ ನೀಡಿದ್ದು, ಪಂದ್ಯ ನಡೆಯುವ ಸ್ಥಳವಕಾಶದ ಬಗ್ಗೆ ಇನ್ನು ನಿರ್ಧರವಾಗಿಲ್ಲ. 2020ರಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಮಧ್ಯೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಟಿ20 ವಿಶ್ವಕರ್ ಪಂದ್ಯಾವಳಿಗಳು ದಕ್ಷಿಣಾ ಆಫ್ರಿಕಾ (2017), ಇಂಗ್ಲೆಂಡ್ (2009) ವೆಸ್ಟ್ ಇಂಡೀಸ್ (2010) ಹಾಗೂ ಶ್ರೀಲಂಕಾ (2012), ಬಾಂಗ್ಲಾದೇಶ (2014) ಮತ್ತು ಭಾರತ (2016)ರಲ್ಲಿ ನಡೆದಿತ್ತು.
Comments