ಬ್ಯಾಡ್ಮಿಂಟನ್ ಓಪನ್ ಕಿರೀಟ್ ಶ್ರೀಕಾಂತ್ ಮುಡಿಗೆ

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ೪೭ನೇ ರಾಂಕಿನ ಜಪಾನ್ ಆಟಗಾರ ಕಾಜೂಮಾಸಾ ಸಕಾಯಿವರನ್ನು ಪರಾಜಯಗೊಳಿಸುವುದರ ಮೂಲಕ ಇಂಡೋನೇಷ್ಯಾ ಓಪನ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಗೆಲ್ಲುವ ಏಕೈಕ ಗುರಿಯೊಂದಿಗೆ ಹೋರಾಡಿದ್ದ ಶ್ರೀಕಾಂತ್ 21-15,18-21,24-22 ಗೇಮ್ ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೇರಿದ್ದರು. ಈ ಹೋರಾಟ ಒಂದು ತಾಸು ಮತ್ತು ೧೨ ನಿಮಿಷಗಳವರೆಗೆ ಸಾಗಿತ್ತು. ಅಮೋಘ ಆಟವಾಡಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ವಿಶ್ವ ನಂ ೧ ಕೊರಿಯಾದ ಸನ್ ವಾನ್ ಹೊ ಅವರನ್ನು ಮಣಿಸಿ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಕೂಟದ ಫೈನಲ್ ಗೇರಿದ್ದರು.
Comments