ವಿಶ್ವ ಹಾಕಿ ಲೀಗ್,. ಪಾಕ್ ವಿರುದ್ಧ ಭಾರತಕ್ಕೆ ೭-೧ ಜಯ
ಲಂಡನ್: ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಗೆಲುವು ಸಾಧಿಸಿಕೊಂಡಿದೆ. ಪಾಕ್ ತಂಡವನ್ನು 7-1 ಅಂತರದಿಂದ ಬಗ್ಗು ಬಡಿದು ಮುಂದಿನ ಹಂತಕ್ಕೆ ಭಾರತ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪಾಕ್ ವಿರುದ್ಧ 7-1 ಅಂತರದ ಜಯವನ್ನು ಭಾರತ ದಾಖಲೆ ಮಾಡಿದೆ.
ಲಂಡನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನ ತಂಡದ ವಿರುದ್ಧ ಗೆಲುವು ಸಾಧಿಸಿ, ಕ್ವಾರ್ಟರ್ ಪ್ರವೇಶ ಪಡೆದುಕೊಂಡಿದೆ. ಭಾರತದ ಪರ ಆಕಾಶ್ ದೀಪ್ ಉತ್ತಮ ಗೋಲ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖರಾದರು. ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ 7-1 ಗೋಲುಗಳಿಂದ ಪಾಕಿಸ್ತಾನಕ್ಕೆ ಸೋಲುಣಿಸಿದ್ದು, ಪಂದ್ಯದ ಆರಂಭದಲ್ಲಿ ಪಾಕಿಸ್ತಾನ್ ಮೇಲುಗೈಸಾಧಿಸಿತ್ತಾದರೂ 13 ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ನಲ್ಲಿ ಹರ್ಮನ್ ಪ್ರೀತ್ ಸಿಂಗರ್ ಅದ್ಭುತ ಡ್ರ್ಯಾಗ್ ನಿಂದ ಮೊದಲ ಗೋಲು ಗಳಿಸಿದ ಭಾರತ ಅಲ್ಲಿಂದ ಹಿಂದಿರುಗಿ ನೋಡಲಿಲ್ಲ.
Comments