ಮೈದಾನದಲ್ಲಿ ಕೊಹ್ಲಿ ಒಬ್ಬ ಸರ್ಜನ್ ಇದ್ದಂತೆ - ಎಬಿ ಡಿವಿಲಿಯರ್ಸ್

ಲಂಡನ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇ0ದು ನಡೆಯಲಿದ್ದು, ಭಾರತ-ಪಾಕ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಈ ಮಧ್ಯೆ ಉಭಯ ತಂಡಗಳಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ.ಡಿವಿಲಿಯರ್ಸ್ ಶುಭ ಕೋರಿದ್ದಾರೆ.
ಐಪಿಎಲ್ ಆರು ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡದಲ್ಲಿ ನಾನು ಹಲವು ಪಂದ್ಯಗಳನ್ನು ಆಡಿದ್ದೇನೆ. ಮೈದಾನದಲ್ಲಿ ತಂಡದ ಮೇಲಿನ ಒತ್ತಡವನ್ನು ಹೇಗೆ ನಿವಾರಿಸಬೇಕು ಎಂಬುದರ ಬಗ್ಗೆ ಕೊಹ್ಲಿ ಅರಿವಿದೆ. ಮೈದಾನದಲ್ಲಿ ಇರುವಷ್ಟು ಸಮಯ ಕೊಹ್ಲಿ ಒಬ್ಬ ಸರ್ಜನ್ ರಂತೆ ಕೆಲಸ ಮಾಡುತ್ತಾರೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸಾಧನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಹೆಚ್ಚು ಬಲಿಷ್ಠವಾಗಿದೆ ಎಂದಿದ್ದಾರೆ.
Comments