ಐಸಿಸಿ ಟ್ರೋಫಿ IND-BANGLA,, ಸೆಮಿಫೈನಲ್ ಗೆ ಯಾರು ಎಂಟ್ರಿ?



ಬರ್ಮಿಂಗ್ ಹ್ಯಾಮ್ : ಬರ್ಮಿಂಗ್ ಹ್ಯಾಮ್`ನಲ್ಲಿ ನಡೆಯುತ್ತಿರುವ ಚಾಂಪಿಯನ್ಞಸ್ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಪಂದ್ಯ ಆರಂಭಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಫೈನಲ್ ಗೆ ಪ್ರವೇಶ ಮಾಡುವ ಅವಕಾಶ ಒದಗಿ ಬಂದಿದೆ. ಟೋರ್ನಿಯ ಲೀಗ್ ಹಂತದ ಪಂದ್ಯ ಸವಾಲ ಮೂಡಿಸುತ್ತದೆ. ಆದ್ದರಿಂದ ನಮಗೆ ಸೆಮಿಫೈನಲ್ ಗೆ ಎಂಟ್ರಿ ನೀಡುವುದಕ್ಕೆ ಇದೊಂದು ಅವಕಾಶವಿದೆ ಎಂದಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಹಲವು ಪಂದ್ಯಗಳು ರದ್ದಾಗಿವೆ. ಇವತ್ತು ಕೂಡ ಪಂದ್ಯ ರದ್ದಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡ ಜೂನ್ ೧೮ರಂದು ನಡೆಯುವ ಸೆಮಿಫೈನಲ್ ಗೆ ಎಂಟ್ರಿ ನೀಡಲಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ನೇರವಾಗಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ.
Comments