ಚಾಂಪಿಯನ್ಸ್ ಟ್ರೋಫಿ: ಇಂಗ್ಲೆಂಡ್ ಗೆ ಪಾಕ್ ಸವಾಲು
ಕಾರ್ಡಿಫ್: ಐಸಿಸ್ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸತತ ೨ನೇ ಬಾರಿಗೆ ಟೂರ್ನಿಯ ಫೈನಲ್ ಆಡುವ ಇರಾದೆಯಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಪಾಕಿಸ್ತಾನ ಅನಿರೀಕ್ಷಿತ ಆಟ ಹಾಗೂ ಬಲಿಷ್ಟ ಬೌಲಿಂಗ್ ಸವಾಲು ನೀಡಲಿದೆ.
ವೇಲ್ಸ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಇದೇ ಮೈದಾನದಲ್ಲಿ ನಡೆದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ, ಶ್ರೀಲಂಕಾ ತಂಡವನ್ನು ಕೇವಲ ೨೩೬ ರನ್ ಗಳಿಗೆ ನಿಯಂತ್ರಿಸಿತ್ತು. ಇದೇ ಮೈದಾನದಲ್ಲೇ ಇಂಗ್ಲೆಂಡ್ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.
ಜುನೇದ್ ಖಾನ್, ಮೊಹಮದ್ ಅಮಿರ್ ಹಾಗೂ ಫಾಹಿಮ್ ಅಶ್ರಫ್ ಹಾಗೂ ಹಸನ್ ಅಲಿ ಏಕೈಕ ಸ್ಪಿನ್ನರ್ ಇಮಾದ್ ವಾಸಿಂ ಬಲಿಷ್ಠ ಬೌಲಿಂಗ್ ವಿಭಾಗವೇ ಪಾಕಿಸ್ತಾನದ ಬಲ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳಉ ೧೦ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ ನ ೬ ಪಂದ್ಯ ಗೆದ್ದಿದ್ದರೆ, ಪಾಕಿಸ್ತಾನ ೪ರಲ್ಲಿ ಜಯಿಸಿದೆ. ೧೯೯೬ರ ವಿಶ್ವಕಪ್ ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾದಾಗ ಪಾಕ್ ಗೆಲುವು ಸಾಧಿಸಿತ್ತು.
Comments