MRF ಜತೆಗೆ ೧೦೦ ಕೋಟಿಗೆ ಸಹಿ ಹಾಕಿದ ಕೊಹ್ಲಿ?
ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಫೈನಲ್ ಗೆ ತಲುಪಿದ್ದು ಆಗಿದೆ. ಸದ್ಯ ವಿರಾಟ್ ಕೊಹ್ಲಿ ಮದ್ರಾಸ್ ರಬ್ಬರ್ ಫ್ಯಾಕ್ಟರಿ(MRF) ಕಂಪನಿ ಜತೆಗೆ ೧೦೦ ಕೋಟಿ ಮೀರಿಸುವ ಒಪ್ಪಂದಕ್ಕೆ ಕೊಹ್ಲಿ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಎಕಾನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ವಿರಾಟ್ ಕೊಹ್ಲಿ MRF ಜತೆಗೆ ೮ ವರ್ಷಕ್ಕಾಗಿ ಡೀಲ್ ಗೆ ಸಹಿ ಹಾಕಿದ್ದಾರಂತೆ. ಇದಕ್ಕೂ ಮೊದಲು ವಿರಾಟ್ ಪೂಮಾ ಕಂಪನಿ ಜೆತಗೆ ೧೧೦ ಕೋಟಿಗೆ ಸಹಿ ಹಾಕಿದ್ದರು. ಇದರ ಈ ಕಂಪನಿ ಜತೆಗೆ ಕೆಲಸ ಮಾಡಿದ ಹಲವು ದಿಗ್ಗಜ ಆಟಗಾರರು ಇದ್ದಾರೆ. ಮೊದಲಿಗೆ ಸಚಿನ್ ತೆಂಡೂಲ್ಕರ್ ಕೂಡ ಎಂಆರ್ ಎಫ್ ಜತೆಗೆ ಡೀಲ್ ಗೆ ಸಹಿ ಹಾಕಿದ್ದರು, ಮಾಜಿ ಆಟಗಾರ ಬ್ರ್ಯಾನ್ ಲಾರಾ , ಸ್ಟೀವನ್ ವಾಸ್ ಜೆಸ್ಸೆ ಕೂಡಾ ಹೆಸರು ಕೇಳಿ ಬಂದಿತ್ತು.
ಇನ್ನು ಪೂಮಾ ಜತೆಗೆ ಒಪ್ಪಂದ ಮಾಡಿಕೊಂಡ ಮೊದಲನೆಯ ಆಟಗಾರ ವಿರಾಟ್ ಕೊಹ್ಲಿ, ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಎನ್ನಿಸಿಕೊಂಡಿದ್ದರು. ಪೂಮಾ ದೊಂದಿಗೆ ೧೧೦ ಕೋಟಿ ರೂ.ಗಳ ೮ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಕೊಹ್ಲಿ , ಈ ಮೂಲಕ ೧೦೦ ಕೋಟಿ ಸಹಿ ಹಾಕಿದ ಆಟಗಾರ ಎನಿಸಿಕೊಂಡರು.
ಸದ್ಯ ಎಮ್ ಆರ್ ಎಫ್ ಟೈರ್ಸ್ ಬ್ರ್ಯಾಂಡ್ ಜಾಹೀರಾತಿಗೆ ಕೊಹ್ಲಿ ೧೦೦ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.
Comments