ಪಾಕಿಸ್ತಾನ- ಶ್ರೀಲಂಕಾ ಪಂದ್ಯ ಇಂದು
ಕಾರ್ಡಿಫ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗೆಲ್ಲಲೇಕಾದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿದ್ದು ಗೆದ್ದವರು ಸೆಮಿಫೈನಲ್ ಗೆ ಪ್ರವೇಳ ಪಡೆಯಲಿದ್ದಾರೆ, ಹೀಗಾಗಿ ಬಿ ಗುಂಪಿನ ಈ ಪಂದ್ಯದಲ್ಲಿ
ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲಾಗುತ್ತಿದೆ. ಉಭಯ ತಂಡಗಳ ಭರವಸೆ ಹೆಚ್ಚಿದೆ. ಈಗ ಈ ತಂಡಗಳೇ ಮುಖಾ ಮುಖಿಯಾಗಲಿವೆ. ಆದ್ದರಿಂದ ಜಯ ಯಾರಿಗೆ ಸೀಗುತ್ತದೆ? ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಬಲಿಷ್ಠ ತಂಡಗಳ ಎದುರಾಳಿಗಳನ್ನು ಮಣಿಸಿದ ತಂಡಗಳ ನಡುವಿನ ಹಣಾಹಣಿಗೆ ಸೋಫಿಯಾ ಗಾರ್ಡನ್ಸ್ ಇವತ್ತು ಸಾಕ್ಷಿಯಾಗಲಿದೆ.
ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್ ಗಳಿಂದ ಮಣಿ ಸಿತ್ತು. ಭಾರತ ವಿರುದ್ಧದ ಮೊದಲ ಪಂದ್ಯ ದಲ್ಲಿ ೧೨೪ ರನ್ ಗಳಿಂದ ಸೋಲುಂಡಿದ್ದ ಪಾಕಿಸ್ತಾನ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.
Comments