ಸೆಮಿಫೈನಲ್ ಗೆ ಭಾರತ ಲಗ್ಗೆ
ಲಂಡನ್ : ಹಾಲಿ ಚಾಂಪಿಯನ್ಸ್ ಭಾರತ ಕ್ರಿಕೆಟ್ ತಂಡವು ಭಾನುವಾರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ವರ ಘಟ್ಟಕ್ಕೆ ಪ್ರವೇಶ ಮಾಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿಗೆ ಬೌಲರ್ ಗಳು ನಿರಾಸೆ ಮಾಡಲಿಲ್ಲ. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕಳಪೆ ಬೌಲಿಂಗ್ ಮತ್ತು ಫಿಲ್ಡಿಂಗ್ ಇಲ್ಲಿ ಇರಲಿಲ್ಲ. ಅಮೋಘವಾಗ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆಯಿಂದಾಗಿ ತಂಡವು ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣಾ ಆಫ್ರಿಕಾ ತಂಡವು ೪೪.೩ ಓವರ್ ಗಳಲ್ಲಿ ೧೯೧ ರನ್ ಗಳಿಸಿತು. ಈ ಸಾಧಾರಣ ಗುರಿ ಮುಟ್ಟಲು ಕೊಹ್ಲಿ ಬಳಗವು ತಾಳ್ಮೆಯಿಂದ ಅಡಿ ೩೮ ಓವರ್ ಗಳಲ್ಲಿ ೨ ವಿಕೆಟ್ ಗಳಿಗೆ ೧೯೩ ರನ್ ಗಳಿಸಿತು.
ಭಾರತ ತಂಡದ ಜಸ್ ಪ್ರೀತ್ ಬೂಮ್ರಾ (28ಕ್ಕೆ 2) ಮತ್ತು ಭುವನೇಶ್ವರ್ ಕುಮಾರ್ (23ಕ್ಕೆ2) ಅಮೋಘ ಬೌಲಿಂಗ್ ಬಲದಿಂದ ಭಾರತ ೮ ವಿಕೆಟ್ ಗಳಿಂದ ದಕ್ಷಿಣಾ ಆಫ್ರಿಕಾ ವಿರುದ್ಧ ಜಯಿಸಿತು. ಎಬಿ ಡಿವಿಲಿಯರ್ಸ್ ನಾಯಕತ್ವದ ದಕ್ಷಿಣಾ ಆಫ್ರಿಕಾ ತಂಡವು ಟೂರ್ನಿಯಿಂದ ಹೊರಬಿದ್ದಿತು.
ಪರಿಣಾಮಕಾರಿ ಬೌಲರ್ ಗಳಿಗೆ ಹೆಚ್ಚು ದೊರೆಯುತ್ತಿದ್ದ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದ ಪಿಚ್ ನಲ್ಲಿ ಜಸ್ ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಮಿಂಚಿದರು. ೧೮ ಓವರ್ ಗಳಲ್ಲಿ ಆಫ್ ಸ್ಪಿನ್ನರ್ ಯಶಸ್ಸು ಸಾಧಿಸಿದರು, ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದ ಅಶ್ವಿನ್ ಎಸೆತವನ್ನು ಹೊಡೆಯುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚಿತ್ತರು.
76 ರನ್ ಗಳ ಮೊದಲ ವಿಕೆಟ್ ಜತೆಯಾಟಕ್ಕೆ ತೆರೆಬಿತ್ತು. ಏಳು ಓವರ್ ಗಳಲ್ಲಿ ನಂತರ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಕ್ವಿಂಟನ್ ಡಿ ಕಾಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
Comments